Devadiga Yuva Vedike Udupi conducts inspiring agricultural activity
To recall our root and to remind the importance of agriculture Udupi youth showed a different way of bringing youth together by agricultural activities.
On July 17, 2016 for the second year young minds of Devadiga Yuva Vedike, their family members and friends together more than hundred involved in "Neji Naduva" - planting paddy program at Alevoor, Udupi. In half a day they planted more than 1.75 acre land.
They also honored senior farmer Smt. Laxmi Sherigar to whom this land belongs.
At this occasion secretary Prabhakar Devadiga, treasurer Praveen Kumar, other members Pradeep Moily, Wakesh Kumar, Ashok Devadiga, Ashok alevoor, Ex-President of Udupi Devadigara Seva Sangha Shridhara Devadiga, President of Nadashre Cooperative Society Chandrakant Devadiga, Srinivasa Devadiga were present.
ದೇವಾಡಿಗ ಯುವ ವೇದಿಕೆ ಉಡುಪಿಯಿಂದ ಎರಡನೇ ವರುಷದ ನೇಜಿ ನಡುವೆ ಸಂಭ್ರಮ:
ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ದಿನೇ ದಿನೇ ಕೃಷಿ ಚಟುವಟಿಕೆಗಳು ಕಣ್ಮರೆಯಾಗುತ್ತಿವೆ. ಕೃಷಿಕಾರ್ಯಗಳಿಗೆ ದೂರದ ಬಾಂಗ್ಲದಿಂದ ಕಾರ್ಮಿಕರನ್ನು ಬಳಸುತ್ತಿರುವ ದಿನ ಇಂದು ಬಂದಿದೆ. ಇಂತಹ ದಿನಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಬೇಳೆಸುವ ಪ್ರಯತ್ನವೊಂದು ಅಲೆವೂರಿನಲ್ಲಿ, ದೇವಾಡಿಗ ಯುವ ವೇದಿಕೆ (ರಿ) ಉಡುಪಿ ಇದರ ಯುವಕ ಯುವತಿಯರಿಂದ ನಡೆಯಿತು. ನೂರಕ್ಕೂ ಮಿಕ್ಕಿದ ಯುವಕ ಯುವತಿಯರು ಹಿರಿಯರ ಜೊತೆಗೂಡಿ ಸುಮಾರು 1.75 ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಒಂದು ಅರ್ಥಪೂರ್ಣ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಈ ಸಂಧರ್ಭದಲ್ಲಿ ಹಿರಿಯ ರೈತ ಮಹಿಳೆ ಶ್ರೀಮತಿ ಲಕ್ಷ್ಮಿ ಶೇರಿಗಾರ್ತಿ ಅಲೆವೂರು ಇವರನ್ನು ಸನ್ಮಾನಿಸಲಾಯಿತು.
ಎರಡನೇ ವರುಷ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಧರ್ ದೇವಾಡಿಗ, ನಾದಶ್ರೀ ಕೋ-ಆಪರೇಟಿವ್ ಬ್ಯಾಂಕ್ ನಾ ಅಧ್ಯಕ್ಷ ಶ್ರೀ ಚಂದ್ರಕಾಂತ್ ದೇವಾಡಿಗ, ಹಿರಿಯರಾದ ಶ್ರೀನಿವಾಸ್ ದೇವಾಡಿಗ, ಮಾಧವ ದೇವಾಡಿಗ, ಯುವ ವೇದಿಕೆಯ ಕಾರ್ಯದರ್ಶಿ ಪ್ರಭಾಕರ್ ದೇವಾಡಿಗ, ಪ್ರವೀಣ್ ಕುಮಾರ್, ಪ್ರದೀಪ್ ಮೊಯಿಲಿ, ಅಶೋಕ್ ದೇವಾಡಿಗ, ಅಶೋಕ್ ಅಲೆವೂರು, ವಾಕೇಶ್ ಮೊದಲಾದವರು ಉಪಸ್ಥಿತರಿದ್ದರು.