Account
Sanghas News NewsMakers
Personalities
Articles Students
Obituaries
Womens Web
Matrimony Forums
  •  
 
 
 
 
 
 
News
12.02.2013 01:43    Comments: 0    Categories: Karkala News      Tags: karkala sangha - annual general meeting  

ದೇವಾಡಿಗ ಸುಧಾರಕ ಸಂಘ (ರಿ) ತಾಲೂಕು ಆಫೀಸ್ ರಸ್ತೆ ಕಾರ್ಕಳ


ಇದರ ಮಹಾಸಭೆಯು ದಿನಾಂಕ 23-12-2012 ನೇ ಆದಿತ್ಯವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ದೇವಾಡಿಗ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಮೊಯಿಲಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಶ್ರೀ ಜನಾರ್ಧನ ದೇವಾಡಿಗ ಪಡುಪಣಂಬೂರು,ಅಧ್ಯಕ್ಷರು,ದೇವಾಡಿಗ ಸೇವಾ ಸಂಘ ಪಾವಂಜೆ ಹಳೆಯಂಗಡಿ, ಶ್ರೀ ಚಂದ್ರಶೀಖರ ಎಂ ಎ ಉಪನ್ಯಾಸಕರು,ಸರಕಾರಿ ಪದವಿಪೂರ್ವ ಕಾಲೇಜು ಮುಲ್ಕಿ ಮತ್ತು ಶ್ರೀ ಶೇಖರ್ ದೇವಾಡಿಗ ಅಧ್ಯಕ್ಷರು ಬೆಳ್ಮಣ್ ದೇವಾಡಿಗ ಸಂಘ ಇವರು ಭಾಗವಹಿಸಿದ್ದರು.

 

ಈ ಸಂದರ್ಭದಲ್ಲಿ ಹಿರಿಯ ನಾಗಸ್ವರ ವಾದಕರಿಗೆ ಸನ್ಮಾನಿಸಲಾಯಿತು.ಕಾರ್ಯದರ್ಶಿಯಾಗಿರುವ ಶ್ರೀ ರಾಮಚಂದ್ರ ನೆಲ್ಲಿಕಾರ್ ಉಪನ್ಯಾಸಕರು ಇವರು ಕಾರ್ಕಳ ಕೆ ಎಂ ಎ ಎಸ್ ಶಿಕ್ಷಣ ಸಂಸ್ಥೆಗಳ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದು ಅವರನ್ನು ಸನ್ಮಾನಿಸಲಾಯಿತು.

ಹಾಗೂ 2012-13ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಕೆ ಶಿವರಾಂ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

 

ವಾರ್ಷಿಕ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಶ್ರೀ ರಾಮಚಂದ್ರ ನೆಲ್ಲಿಕಾರ್ ಮಂಡಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಶ್ರೀ ಸದಾಶಿವ ದೇವಾಡಿಗ ಮತ್ತು ಶ್ರೀಮತಿ ಸೀಮ ದೇವಾಡಿಗ, ಯುವ ವೇದಿಕೆ ಅಧ್ಯಕ್ಷರಾದ ಶ್ರೀ ಪ್ರವೀಣ್ ದೇವಾಡಿಗ ಮತ್ತು ದೇವಾಡಿಗ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಕುಸುಮಾಂಜಲಿ ಉಪಸ್ಥಿತರಿದ್ದರು.

ಶ್ರೀ ಸುರೇಶ್ ಮೊಯಿಲಿ ಸಾಣೂರು ಕಾರ್ಯಕ್ರಮ ನಿರ್ವಹಿಸಿ ಶ್ರೀ ರಮೇಶ್ ದೇವಾಡಿಗ ವಂದಿಸಿದರು.


 
Comments
Order by: 
Per page: 
 
  • There are no comments yet
Sponsered Adds

Actions
Rating
0 votes
Sponsered Adds
Powered by Social DNA labs
Copyright © 2015 Devadiga.com