Account
Sanghas News NewsMakers
Personalities
Articles Students
Obituaries
Womens Web
Matrimony Forums
 •  
 
 
 
 
 
 
News
02.07.2012 02:48    Comments: 4    Categories: Sangha News      Tags: hiriadka  

HIRIADKA SANGHA  - MAHASABHA

ಕರ್ನಾಟಕ ರಾಜ್ಯ ದೇವಾಡಿಗರ ಸುಧಾರಕ ಸಂಘ (ರಿ) ಮಂಗಳೂರು
ಉಪಸಂಘ - ಹಿರಿಯಡಕ

ಕರ್ನಾಟಕ ರಾಜ್ಯ ದೇವಾಡಿಗರ ಸುಧಾರಕ ಸಂಘ (ರಿ.), ಮಂಗಳೂರು, ಉಪಸಂಘ - ಹಿರಿಯಡಕ ಇದರ ೨೦೧೧-೧೨ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: ೨೭/ಒಚಿಥಿ/೨೦೧೨ ನೇ ಭಾನುವಾರ ಬೆಳಿಗ್ಗೆ ೯.೦೦ ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಹಾಗೂ ೧೧.೩೦ಕ್ಕೆ ಸಭಾಕಾರ್ಯಕ್ರಮದೊಂದಿಗೆ ಜರುಗಿತು.
ಮಹಾಸಭೆಯ ಅಧ್ಯಕ್ಷಸ್ಥಾನವನ್ನು ಸಂಘದ ಅಧ್ಯಕ್ಷರಾದ ಶ್ರೀ ಎಚ್ ನರಸಿಂಹ ಸೇರಿಗಾರ್ ರವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ವೀಕ್ಷಕರಾಗಿ, ಮುಖ್ಯ ಅಥಿತಿಗಳಾಗಿ ಕೇಂದ್ರ ಸಂಘದ ಕೋಶಾಧಿಕಾರಿ ಶ್ರೀ ಸದಾಶಿವ ಎಂ ದೇವಾಡಿಗ, ಲೆಕ್ಕ ಪರಿಶೋಧಕರಾದ ಶ್ರೀ ಮುರಳೀ ಬೋಳಾರ್, ಸಂಘದ ಕಾರ್ಯದರ್ಶಿ ಶ್ರೀ ಪಿ ಸದಾಶಿವ, ಸಂಘದ ಖಜಾಂಚಿ ಶ್ರೀ ರಾಧೇಶ್ ಸೇರಿಗಾರ್ ಇವರುಗಳು ಆಸೀನರಾಗಿದ್ದರು.
ಕು|| ಶತ ಮತ್ತು ಕು|| ಕಾವ್ಯ ಪ್ರಾರ್ಥಿಸಿ, ಶ್ರೀ ಎಚ್ ರವಿರಾಜ್ ಇವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಪಿ ಸದಾಶಿವ ವಾರ್ಷಿಕ ವರದಿಯನ್ನು ಓದಿ, ಖಜಾಂಚಿ ಶ್ರೀ ್ರ ರಾಧೇಶ್ ಸೇರಿಗಾರ್ ೨೦೧೧-೧೨ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ಮಂಜೂರಾತಿಗೊಂಡಿತು.
ಶ್ರದ್ದಾಂಜಲಿ: ಉಪಸಂಘದ ವ್ಯಾಪ್ತಿಯಲ್ಲಿ ಸಮಾಜದ ಅಭಿವೃದ್ದಿಗೆ ಸಹಕರಿಸಿ ಅಗಲಿದ ಸಮಾಜ ಬಾಂಧವರಿಗೆ ಹಾಗೂ ಇತ್ತೀಚೆಗೆ ನಿಧನರಾದ ಸಂಘದ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಹಿರಿಯಡಕ ದಾಸ ಸೇರಿಗಾರರಿಗೂ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರ್‌ದ್ದಾಂಜಲಿ ಅರ್ಪಿಸಲಾಯಿತು .
ಸನ್ಮಾನ: ಹಿರಿಯ ಸಮಾಜ ಬಾಂಧ‌ವರುಗಳಾದ ಶ್ರೀಮತಿ ಗುಲಾಬಿ ಕೃಷ್ಣ ಶೇರಿಗಾರ್ತಿ, ಶ್ರೀಮತಿ ಕಮಲಾ ಪಾರ ಶೇರಿಗಾರ್ತಿ, ಶ್ರೀಮತಿ ಗುಲಾಬಿ ಶೀನ ಶೇರಿಗಾರ್ತಿ, ಶ್ರೀ ನಾಗಪ್ಪ ಶೇರಿಗಾರ್ ಪುತ್ತಿಗೆ, ಶ್ರೀಮತಿ ಅಪ್ಪಿ ಪಪ್ಪು ಶೇರಿಗಾರ್ತಿ, ಶ್ರೀ ಸಿದ್ದು ದೇವಾಡಿಗ ಬೆಳ್ಳ್‌ರ್ಪಾಡಿ, ಶ್ರೀಮತಿ ಅಪ್ಪಿ ಪಪ್ಪು ಶೇರಿಗಾರ್ತಿ, ಶ್ರೀಮತಿ ಗಂಗಾ ಶೇರಿಗಾರ್ತಿ ಇವರುಗಳನ್ನು ಸನ್ಮಾನಿಸಲಾಯಿತು ಹಾಗೂ ಕೊಡಿಬೆಟ್ಟು ಗ್ರಾಮ ಪಂಚಾಯತ್‌ನ ಅಧ್ಯಕ್ಷ್‌ರಾಗಿ ಇತ್ತೀಚೆಗೆ ಆಯ್ಕೆಯಾದ ಶ್ರೀ ಪೆರ್ಣ್ಂಕಿಲ ಸುಂದರ ಸೇರಿಗಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುಸ್ತಕ ವಿತರಣೆ: ನಂತರ ಮಕ್ಕಳನ್ನು ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಸುಮಾರು ೩೭೫ ಕ್ಕೂ ಮಿಕ್ಕಿ ಶಾಲಾಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ಶ್ರೀ ಸದಾಶಿವ ಎಂ ದೇವಾಡಿಗರು ಕಾರ್ಯಕ್ರಮವನ್ನು ಮುಕ್ತಕಂಠದಿಂದ ಅಭಿನಂದಿಸಿ, ವಿಧ್ಯಾಗಳಿಗೆ ಶುಭ ಹಾರೈಸಿದರು. ಶ್ರೀ ಮುರಳೀ ಬೋಳಾರ್ ಇವರು ಮಾತನಾಡಿ ಹಿರಿಯಡಕ ಸಂಘವು ಹೆಮ್ಮೆಂ ಉಪಸಂಘವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಹಿರಿಯಡಕ ಸಂಘದ ಅಧ್ಯಕ್ಷರಾದ ಶ್ರೀ ಎಚ್ ನರಸಿಂಹ ಸೇರಿಗಾರ್‌ರವರು ಮಾತನಾಡಿ ಸಂಘದ ಅಬಿವ್ರದ್ದಿಗೆ ಸಮಾಜ ಬಾಂಧವರ ಸಹಕಾರ ಕೋರಿದರು.
ಸಭಾಕಾರ್ಯಕ್ರಮದಲ್ಲಿ ಸುಮಾರು ೫೦೦ ಮಂದಿ ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಶ್ರೀ ದಿನೇಶ್ ಸೇರಿಗಾರರವರು ನಿರ್ವಹಿಸಿ, ಶ್ರೀ ರಾಧೇಶ್ ಇವರು ವಂದಸಿದರು. ಶ್ರೀ ವಿನಯ ಕುಮಾರ್ ಇವರು ಸನ್ಮಾನಿತರ ವಿವರ ಓದಿ, ಶ್ರೀ ಎಚ್ ರವಿರಾಜ್ ಇವರು ಪುಸ್ತಕ ವಿತರಣೆಯ ಯಾದಿಯನ್ನು ವಾಚಿಸಿದರು.
ಕಾರ್ಯಕ್ರಮದ ನಂತರ ಸರ್ವರೂ ಸಹಭೋಜನದಲ್ಲಿ ಪಾಲ್ಗೊಂಡರು.

 

Dinesh - Joint Secretary


ಪಿ ಸದಾಶಿವ
(ಕಾರ್ಯದರ್ಶಿ)

 
Comments
Order by: 
Per page: 
 
 •  devadiga_admin wrote 879 Days Ago (neutral) 
   
  0
  RaghavendraG wrote 123 Days Ago (neutral)


  Very late updatation.

  Nice to see timely, well organised sangha activities in Hiriadka. Requesting everyone to support these sanghas by visiting, giving suggestions, donating etc.,
   
     
   
   
  0 points
   
 •  devadiga_admin wrote 879 Days Ago (neutral) 
   
  0

  beeji wrote 122 Days Ago (neutral)


  Congratulations to Hiriadka Sangha on their MAHA SABHA.

  The Sangha has been very active & its PR is very interactive too. Best Wishes.
   
     
   
   
  0 points
   
 •  devadiga_admin wrote 879 Days Ago (neutral) 
   
  0
  HiriadkaMohandas wrote 120 Days Ago (neutral)


  I am proud of the progress and activities of our Hiriadka Sangha. Truly it is one of the active Sanghas and I wish it becomes a source of inspiration for Devadigas to unite in other rural centres. Congratuations to all my samaja bhandhavas at Hiriadka.
   
     
   
   
  0 points
   
 •  devadiga_admin wrote 879 Days Ago (neutral) 
   
  0
  premachandra wrote 107 Days Ago (neutral)


  Congratulations, Good activities...
   
     
   
   
  0 points
   
Sponsered Adds

Actions
Rating
0 votes
Sponsered Adds
Powered by Social DNA labs
Copyright © 2015 Devadiga.com