News
09.02.2013 01:38
Comments: 0
Categories: Mumbai News
Tags: mumbai sports 2013 golden jubilee
ಮುಂಬುಯಿ ದೇವಾಡಿಗ ಸಂಘದ ಸ್ಪೋರ್ಟ್ಟ್ಸ ಕ್ಲಬ್‌ನ ಸ್ವರ್ಣ ಮಹೋತ್ಸವ ಕ್ಕೆ ಅದ್ದೂರಿಯ ಚಾಲನೆ

ದೇವಾಡಿಗ ಸಂಘ ಮುಂಬುಯಿ ಇದರ ಕ್ರೀಡೋತ್ಸವದ ಸ್ವರ್ಣಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಮುಂಬಯಿಯ ಪರೆಲ್‌ನ ಸೆಂಟ್ರಲ್ ರೈಲ್ವೇ ಸ್ಫೋರ್ಟ್ಸ ಅಸೋಸಿಯೇಶನ್ ಮೈದಾನದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಇದರ ಅಧ್ಯಕ್ಷ ಶ್ರೀ ಜಯ ಸಿ ಸುವರ್ಣ ಇವರು ಉಧ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ ಎಚ್ ಮೋಹನದಾಸ ಮುಂಬಾಯಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಶ್ರೀ ಅಯ್ಕಳ ಹರೀಶ್ ಶೆಟ್ಟಿ, ಶ್ರೀ ರತ್ನಾಕರ ಎ ಬಂಗೇರ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷ ಶ್ರೀ ದಿನೇಶ್ ಆರ್ ದೇವಾಡಿಗ, ದುಬೈ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ಹರೀಶ್ ಸೇರಿಗಾರ್, ಮುಂಬಯಿ ಅಕ್ಷಯ ಕೋಪರೇಟಿವ್ ಕ್ರೆಡಿಟ್ ಸೊಸ್ಯಟಿಯ ಅಧ್ಯಕ್ಷ ಶ್ರೀ ಗೋಪಾಲ್ ಎಂ ಮೊಯಿಲಿ, 'ಕರ್ನಾಟಕ ಮಲ್ಲ' ಪತ್ರಿಕೆ ಮುಖ್ಯ ಸಂಪಾದಕ ಶ್ರೀ ಚಂದ್ರಶೇಖರ ಪೆಲತಾಡಿ, ಮುಂಬಾಯಿ ಬಂಟರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶ್ರೀ ಶ್ಯಾಮ್ ಎಂ ಶೆಟ್ಟಿ, ಮಂಗಳೂರಿನ ನಿವೃತ್ತ ಪೋಲೀಸ್ ಮಹಾ ನಿರೀಕ್ಷಕರು ಶ್ರೀ ಎಂ ಗಣೇಶ್, ಬೆಂಗಳೂರಿನ ದೇವಾಡಿಗ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀ ಕೆ ಚಂದ್ರಶೇಖರ್, ಮುಂಬಯಿ ಬಿಲ್ಲವ ಸಂಘದ ಅಧ್ಯಕ್ಷ ಶ್ರೀ ಎಲ್ ಅಮಿನ್, ಸಾಯಿಕೇರ್ ಲಾಜಿಸ್ಟಿಕ್‌ನ ಅಧ್ಯಕ್ಷ ಮತ್ತು ಮಹಾನಿರ್ದೇಶಕರಾದ ಶ್ರೀ ಸುರೇಂದ್ರ ಎ ಪೂಜಾರಿ, ಪುಣೆ ಸಂಘದ ಅಧ್ಯಕ್ಷ ಪ್ರಭಾಕರ ಜಿ ದೇವಾಡಿಗ, ನಾಸಿಕ್ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ದೇವಾಡಿಗ, ಸಂಘದ ಹಿರಿಯ ಮಾಜಿ ಅಧ್ಯಕ್ಷ ಕೆ ಬುಜಂಗಾಧರ ಹಾಗೂ ಕ್ರೀಡಾ ಸಮಿತಿಯ ಚೇರಮೆನ್ ಶ್ರೀ ಎಚ್ ಜಯ ದೇವಾಡಿಗ ಇವರುಗಳು ಉಪಸ್ಥಿತರಿದ್ದರು.
ಯಕ್ಷಗಾನ ವೇಷ, ಕೊಂಬು, ಚಂಡೆ, ವಾದ್ಯ ಹಾಗೂ ಅಂಜುಮಾನ್ ಹೈಸ್ಕೂಲ್‌ನ ವಿದ್ಯಾರ್ಥಿಗಳ ಬ್ಯಾಂಡ್‌ನೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು ಹಾಗೂ ಮುಂಬುಯ 10 ಪ್ರಾದೇಶಿಕ ಸಮನ್ವಯ ಸಮಿತಿಗಳು, ಬೆಂಗಳೂರು, ಮಂಗಳೂರು, ಭಟ್ಕಳ, ಬೈಂದೂರ್, ಹೊನ್ನಾವರ, ಸಿರಸಿ, ಹಿರಿಯಡಕ, ಉಡುಪಿಗಳಿಂದ ಬಂದ ಕ್ರೀಡಾಳುಗಳು ಬ್ಯಾಂಡ್‌ನೊಂದಿಗೆ ಶಿಸ್ತುಬದ್ದವಾಗಿ ಕವಾಯತು ನಡೆಸಿದರು.
ಈ ಸಂಧರ್ಭದಲ್ಲಿ ದೇವಾಡಿಗ ಸ್ಪೋರ್ಟ್ಸ ಕ್ಲಬ್‌ನ ಸ್ಥಾಪಕ ಶ್ರೀ ಎನ್ ಪಿ ಸಾಲಿಯಾನ್ ಮತ್ತು ಶ್ರೀಮತಿ ವಸಂತಿ ಎನ್ ಸಾಲಿಯಾನ್ ಇವರನ್ನು ಸಂಘದ ಅಧ್ಯಕ್ಷರಾದ ಶ್ರೀ ಎಚ್ ಮೋಹನದಾಸ ಹಾಗೂ ಶ್ರೀ ಅಯ್ಕಳ ಹರೀಶ್ ಶೆಟ್ಟಿ ಇವರುಗಳು ಸನ್ಮಾನಿಸಿ ಪುರಸ್ಕರಿಸಿದರು.
ಸ್ಪೋರ್ಟ್ಸ ಕ್ಲಬ್‌ನ ಕಾರ್ಯದರ್ಶಿಗಳಾಗಿ ಹಲವಾರು ವರ್ಷಗಳ ಸೇವೆಸಲ್ಲಿಸಿದ ಶ್ರೀ ಎಂ ಬಾಸ್ಕರ್ ಮತ್ತು ಶ್ರೀ ವಾಸು ಎಸ್ ದೇವಾಡಿಗ ಇವರುಗಳನ್ನು ಈ ಸಂಧಂರ್ಭದಲ್ಲಿ ಸನ್ಮಾನಿಸಲಾಯಿತು.
ರ್ಟ್ರಾಯ ಮತ್ತು ಅಂತರ್ಟ್ರಾಯ ಮಟ್ಟದ ಕ್ರೀಡೆಯಲ್ಲಿ ಸಾಧನೆಗಳಿಸಿದ ಹಲವಾರು ಸಮಾಜದ ಕ್ರೀಡಾಳುಗಳನ್ನು ಗೌರವಿಸಲಾಯಿತು.
ಸುವರ್ಣಮಹೋತ್ಸವದ ಕಾರ್ಯದರ್ಶಿ ಶ್ರೀ ಜನಾರ್ಧನ ಸೇರಿಗಾರ ಇವರು ದನ್ಯವಾದ ಸಮರ್ಪಿಸಿ, ಶ್ರೀಮತಿ ಉಷಾ ಶ್ರಿಯಾನ್, ಶ್ರೀ ರವಿ ಉಳ್ಳಾಲ್, ಶ್ರೀ ಪ್ರವೀಣ ನಾರಾಯಣ್, ಶ್ರೀ ಕೆ ಬಾಸ್ಕರ ರಾವ್‌ರವರು ಸಮಾರಂಭದ ಸಂಯೋಜಕರಾಗಿದ್ದರು. ಈ ಕ್ರೀಡೋತ್ಸವದ ಮುಖ್ಯ ಪ್ರಾಯೋಜಕರಾಗಿ ರಿಲೆಯಾನ್ಸ್ ಇಂಡಸ್ಟ್ರೀಸ್, ಸಹ ಪ್ರಯೋಜಕರಾಗಿ ಹೋಟೇಲ್ ಸಾಯಿ ನಿಧಿ ಆಯ್ರೋಳಿ ಮತ್ತು ಸಾಯಿಕೇರ್ ಲಾಜಿಸ್ಟಿಕ್ ಲಿಮಿಟೆಡ್ ಇವರುಗಳು ಸಹಕರಿಸಿದ್ದರು.
ಸಮಾರಂಭದ ಊಟೋಪಚಾರ ವ್ಯವಸ್ಥೆಗೆ ಶ್ರೀ ಶೇಖರ್ ಕೆ ದೇವಾಡಿಗ ಐರೋಳಿ ನವಿ ಮುಂಬಯಿ, ಶ್ರೀ ಧರ್ಮಪಾಲ ಯು ದೇವಾಡಿಗ ಮತ್ತು ಶ್ರೀ ರಮೇಶ ದೇವಾಡಿಗ ಸೌದಿ ಅರೇಬಿಯಾ ಇವರುಗಳು ಪ್ರಾಯೋಜಿಸಿದ್ದರು.
ಈ ಕ್ರೀಡಾಕೋಟದಲ್ಲಿ 600ಕ್ಕೂ ಮಿಕ್ಕಿ ಕ್ರೀಡಾಪಟುಗಳು ಭಾಗವಹಿಸಿ ಪ್ರಥಮ ದಿನದ ಕ್ರೀಡಾಕೋಟ ಅತ್ಯಂತ ಯಶಸ್ವೀಯಾಗಿ ಜರುಗಿತು.





Report: Raghavendra G
Comments
Order by:
Per page:
- There are no comments yet








