ಶ್ರೀ ದತ್ತ ಮಂದಿರ ಯೋಗಾಶ್ರಮ ಟ್ರಸ್ಟ್, ಸತಾರದ ಅಧ್ಯಕ್ಷರಾಗಿ ಹಿರಿಯಡ್ಕ ಶ್ರೀಧರ ಆರ್.ಶೇರೆಗಾರ್ ಪುನರ್ ಆಯ್ಕೆ

  ಶ್ರೀ ದತ್ತ ಮಂದಿರ ಯೋಗಾಶ್ರಮ ಟ್ರಸ್ಟ್, ಪಳ್ಸಿ, ಸತಾರ : 3ನೆಯ ಅವಧಿಗೆ ಅಧ್ಯಕ್ಷರಾಗಿ ಹಿರಿಯಡ್ಕ ಶ್ರೀಧರ ಆರ್.ಶೇರೆಗಾರ್ ಪುರುಷೋತ್ತಮ ಎಂ, ಕುಡ್ವ ಪುನರಾಯ್ಕೆ

ಸತಾರ : ಮಹರಾಷ್ಟ್ರ ಸತಾರ ಜಿಲ್ಲೆಯ ಕೋರೆಗಾಂವ್ ತಾಲೂಕಿನ ಪಳ್ಸಿ ಸ್ಟೇಷನ್ ಸನಿಹದ ಶ್ರೀ ವಿವೇಕಾನಂದ ಮುನಿ ಸ್ಥಾಪಿತ ಶ್ರೀ ದತ್ತ ಮಂದಿರ ಯೋಗಾಶ್ರಮ ಟ್ರಸ್ಟ್ ಪಳ್ಸಿ ಇದರ ನೂತನ ಅಧ್ಯಕ್ಷರಾಗಿ 3ನೆಯ ಅವಧಿಗೆ ಹಿರಿಯಡ್ಕ ಶ್ರೀಧರ ರಾಜ ಶೇರೆಗಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ   ಮೂಡಬಿದ್ರೆ ಬೆಳುವಾಯಿ ಪುರುಷೋತ್ತಮ ಎಂ ಕುಡ್ವ ಅವರು ಆಯ್ಕೆಯಾಗಿದ್ದಾರೆ.

ಮರಾಠಿಗರ ಸ್ವಾಮ್ಯದಲ್ಲಿರುವ ಈ ಮಂದಿರದಲ್ಲಿ ಇವರಿಬ್ಬರೂ ಇದರ ಆಡಳಿತವನ್ನು ವಹಿಸಿಕೊಂಡು ಇಲ್ಲಿನ ಪರಿಸರದವರಿಗೆ ಶುಭ ಸಮಾರಂಭವನ್ನು ಆಯೋಜಿಸಲು ಸಭಾಭವನವನ್ನು ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಿದ್ದಾರೆ.

ಶ್ರೀ ದತ್ತ ಮಂದಿರ ಯೋಗಾಶ್ರಮ ಟ್ರಸ್ಟ್ ನವರಿಂದ ಗಣೇಶ್ ಪುರಿ ವಾಡ, ಥಾಣೆ ಜಿಲ್ಲೆಯ ಸುಮಾರು 28 ಶಾಲೆಗಳ 3500 ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪುಸ್ತಕ, ರೈನ್ ಕೋಟ್, ಪೆನ್ನು, ಪೆನ್ಸಿಲ್, ಕಂಪಾಸ್ ಬಾಕ್ಸ್ ಇನ್ನಿತರ ಶಾಲಾ ಪರಿಕರಗಳನ್ನು ನೀಡಲಾಗುತ್ತಿದೆ. ಇದಲ್ಲದೆ. ಇಲ್ಲಿ ಇನ್ನೂ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಮಾಡಿ ಈ ಮಂದಿರವನ್ನು ಪ್ರಗತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಆದ್ದರಿಂದಲೇ ಇಲ್ಲಿನವರು ಇವರನ್ನು ಮುರು ಆಯ್ಕೆಗೊಳಿಸಿದ್ದಾರೆ.

ಹಿರಿಯಡ್ಕ ಶ್ರೀಧರ ಆರ್.ಶೇರೆಗಾರ್ ಅವರ ಪತ್ನಿ ಜಲಜಾಕ್ಷಿ, ಮಗಳು ನಳಿನಾಕ್ಷಿ ಹಾಗೂ ಮಗ ರಾಜ್ ಕಿರಣ್ ಅವರ ಕುಟುಂಬ ಮುಂಬೈಯಲ್ಲಿ ವಾಸವಾಗಿದ್ದಾರೆ.   

ಆಯ್ಕೆಯಾದ ಹಿರಿಯಡ್ಕ ಶ್ರೀಧರ ಆರ್. ಶೇರುಗಾರ ಮತ್ತು ಪರುಷೋತ್ತಮ ಎಂ. ಕುಡ್ವ ಅವರನ್ನು ಇತರ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.


Share