ಉಪ್ಪುಂದ: ದೇವಾಡಿಗ ಸಂಘ ಮುಂಬೈ ಯವರಿಂದ ಸಂತ್ರಸ್ತರಿಗೆ ವೈದ್ಯಕೀಯ ಧನ ಸಹಾಯ

ಉಪ್ಪುಂದ: ಮಾರಣಾಂತಿಕ ಹಲ್ಲೆಗೊಳಗಾಗಿ ಕೋಟೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಶಾರದಾ ದೇವಾಡಿಗರ ಕುಟುಂಬದವರ ಸಮಸ್ಯೆಯನ್ನು ಮನಗಂಡು ಇಂದು ( 5-06-2019)  ಮುಂಬೈ ದೇವಾಡಿಗ ಸಂಘದವರು ಶಾರದಾ ದೇವಾಡಿಗರ ಮನೆಗೆ ಭೇಟಿ ನೀಡಿ 20000ರೂ ನೆರವು ನೀಡಿದರು. 

ಹಾಗೆಯೇ ನಂತರ ಲಿವರ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಉಪ್ಪುಂದದ ಕಳಿಮನೆ ನಿವಾಸಿಯಾದ ಕೃಷ್ಣ ದೇವಾಡಿಗರ ಮನೆಗೆ ಮುಂಬೈ ದೇವಾಡಿಗ ಸಂಘದವರು ಭೇಟಿ ನೀಡಿ 5000ರೂ ನೆರವು ನೀಡಿದರು.

ಈ ಸಂಧರ್ಭದಲ್ಲಿ ಮುಂಬೈ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ದೇವಾಡಿಗ, ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ದೇವಾಡಿಗ ಉಪ್ಪುಂದ,ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ಉಪ್ಪುಂದ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿಯಾದ ಪುರುಷೋತ್ತಮ ದಾಸ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು


Share