ಅಪಘಾತದಲ್ಲಿ ತೀವ್ರ ಗಾಯಗೊಂಡ ಶಾಲಾ ಬಾಲಕ ನಿತೀಶ್ ನಿಗೆ ಸಹಾಯ ಮಾಡಿ

ಉಪ್ಪುಂದ:  6/6/2019 ರ ಬೆಳಿಗ್ಗೆ ರಸ್ತೆ ಬದಿ ನಿಂತಾಗ ಕಾರು ಡಿಕ್ಕಿಯಾಗಿ ಕಾಲಿಗೆ, ಎದೆಗೆ ಮತ್ತು ತಲೆಗೆ ಪೆಟ್ಟಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವ ಉಪ್ಪುಂದದ ಕಳಿಮನೆ ಜಾನಕಿ ಮಂಜುನಾಥ ದೇವಾಡಿಗರ ಮಗ 4 ನೇ ತರಗತಿಯಲ್ಲಿ ಓದುತ್ತಿರುವ ನಿತೀಶ್ ದೇವಾಡಿಗರ ಶಸ್ತ್ರ ಚಿಕಿತ್ಸೆಗೆ 3.5 ಲಕ್ಷದ ಮೇಲೆ  ಖರ್ಚಾಗುತ್ತದೆ ಎಂದು ತಜ್ಞ ಮಣಿಪಾಲದ ವೈದ್ಯರು ತಿಳಿಸಿರುತ್ತಾರೆ.

ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ಈಗ ದಿಕ್ಕೆ ತೋಚದಂತಾಗಿದೆ. ಧಾನಿಗಳ ನೆರವನ್ನು ಕೋರಿದ್ದಾರೆ. ಸಹೃದಯಿ ಧಾನಿಗಳು ತಮ್ಮ ಕೈಲಾದ ಸಹಾಯ ಮಾಡಿ ನಮ್ಮ ಸಮಾಜದ ಹುಡುಗನ ಪ್ರಾಣ ಉಳಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.+91 99007 72925

ಕರ್ನಾಟಕ ಬ್ಯಾಂಕ್ ಉಳಿತಾಯ ಖಾತೆ ನಂ:

8012500102356001
IFSC CODE.KARB0000801
ಹೆಸರು. ನಿತೀಶ್ ದೇವಾಡಿಗ
S/O ಮಂಜುನಾಥ್ ದೇವಾಡಿಗ 
ಕಳಿಮನೆ ಉಪ್ಪುಂದ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 
ಶ್ರೀಮತಿ ಗೌರಿ ದೇವಾಡಿಗ
9900772925
ಪುರುಷೋತ್ತಮದಾಸ್ ಉಪ್ಪುಂದ
9742019893
ಜಗದೀಶ್ ದೇವಾಡಿಗ ಉಪ್ಪುಂದ
9980896350.

ಮಾನವೀಯತೆ ಮೆರೆದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀ ಮತಿ ಗೌರಿ ದೇವಾಡಿಗ ಮತ್ತು ಸಂಗಡಿಗರು...

ನಿಮಗೆಲ್ಲರಿಗೂ ತಿಳಿದಿರುವಂತೆ ಮೊನ್ನೆ ತಾನೇ ಕಾರು ಅಪಘಾತದಲ್ಲಿ ಕಾಲು ಮೂಳೆ ಮುರಿದು,ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿ ಮತ್ತು ಹಲ್ಲಿನ ಸೆಟ್ ಕಳಚಿ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಳಿಮನೆ ಜಾನಕಿ ಮಂಜುನಾಥ್ ದೇವಾಡಿಗರ ಮಗ 4ನೇ ತರಗತಿಯಲ್ಲಿ ಓದುತ್ತಿರುವ ನಿತೀಶ್ ದೇವಾಡಿಗರ ಚಿಕಿತ್ಸೆಗೆ 3.5 ಲಕ್ಷದ ಮೇಲೆ ಖರ್ಚಾಗುತ್ತದೆ ಎಂದು ಮಣಿಪಾಲ್ ದ ವೈದ್ಯರು ತಿಳಿಸಿರುತ್ತಾರೆ. ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ದಿಕ್ಕೆ ತೋಚದಂತಾಗಿ ದಾನಿಗಳ ನೆರವನ್ನು ಕೋರಿದ್ದಾರೆ.

ಶ್ರೀಮತಿ ಗೌರಿ ದೇವಾಡಿಗ,ನಾಗರತ್ನ ಪೂಜಾರಿ, ಸೀತು ದೇವಾಡಿಗ, ಮರ್ಲಿ ದೇವಾಡಿಗ, ಗುಲಾಬಿ ದೇವಾಡಿಗ ಇಂದು ಬೆಳಿಗ್ಗೆ ಯಿಂದ ಸಂಜೆಯ ತನಕ ಉಪ್ಪುಂದದ ಕೆಲವೊಂದು ಕಡೆ ತಿರುಗುವ ಮೂಲಕ ನೆರವಿನ ಹಸ್ತ ಚಾಚಿ ಸುಮಾರು 55,500 ₹ ಮೊತ್ತದ ಹಣವನ್ನು ಎಲ್ಲಾ ಸಮಾಜದ ದಾನಿಗಳಿಂದ ಸ್ವೀಕರಿಸಿ ಶ್ರೀಮತಿ ಲಕ್ಷ್ಮೀ ದೇವಾಡಿಗರಿಗೆ ಹಸ್ತಾಂತರಿಸಿದ್ದಾರೆ.

ಸಹಾಯ ಹಸ್ತ ನೀಡಿದ  ದಾನಿಗಳಿಗೆ ಧನ್ಯವಾದಗಳು.

ಸಹಾಯ ಹಸ್ತ ನೀಡುವ ದಾನಿಗಳು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ:-
9900772925
9742019893
9980896350.

ವರದಿ: ಜಗ್ಗು ಮೇಲ್ಮನೆ      ಉಪ್ಪುಂದ.


Share