ದೇವಾಡಿಗ ಅಕ್ಷಯ ಕಿರಣ ದ 44 ನೇಯ ಸೇವಾಯಜ್ಣ
ಚಾರ್ಮಾಡಿ: ಕಳೆದ ತಿಂಗಳು ಬೆಳ್ತಂಗಡಿ ಸೀಮೆಯ ಅಂಚಿನಲ್ಲಿ ಚಾರ್ಮಾಡಿ ಗ್ರಾಮದ ಕಿಕ್ಕಿಂಜೇ ಎನ್ನುವ ಊರಿನಲ್ಲಿ ತಮ್ಮ ಕುಲ ಕಸುಬು ಆದ ವಾದ್ಯ ಟಾಸೇ ಬಾರಿಸಿ ಜೀವನ ಸಾಗಿಸುತಿದ್ದ ಇಬ್ಬರು ಅಣ್ಣ ತಮ್ಮಂದಿರಾದ ಶ್ರೀ ಹರೀಶ ದೇವಾಡಿಗ ಮತ್ತು ಪ್ರವೀಣ ದೇವಾಡಿಗರಿಗೆ ಬರೇ ಮನೆಯ ಕಾಲು ದಾರಿಯ ವಿಷಯಕ್ಕೇ ಜಗಳ ತೆಗೆದು ನೆರಮನೆಯವರು ಮಾರಣಾಂತಿಕ ಹಲ್ಲೆ ನಡೆಸಿದ್ದ ಕಾರಣ ಇಬ್ಬರೂ ಸಹೋದರರು ಮಂಗಳೂರಿನ ಏಜೆ ಆಸ್ಪತ್ರೆಯಲ್ಲಿ ಸುಮಾರು 20 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು.
ನಿನ್ನೆ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರಾದ ಶ್ರೀ ಗಣೇಶ ದೇವಾಡಿಗ ಉಜಿರೆ ಮತ್ತು ಶ್ರೀ ಪ್ರವೀಣ ದೇವಾಡಿಗ ಧರ್ಮಸ್ಥಳ ಅವರು ಸಂತ್ರಸ್ತರ ಮನೆ ಚಾರ್ಮಾಡಿ ಕಿಕ್ಕಿಂಜೆಗೆ (ಬೇಳ್ತಂಗಡಿ ಸೀಮೆ ) ಭೇಟಿ ನೀಡಿ ಇಬ್ಬರು ಸಹೋದರರಿಗೇ ರೂ 15000/- ( ತಲಾ ರೂ 7,500/ ದಂತೇ ) ವೈದ್ಯಕೀಯ ನೇರವು ನೀಡಿ ಆದಷ್ಟು ಬೇಗನೆ ಗುಣ ಮುಖ ವಾ ಗಲಿ ಎಂದು ಹಾರೈಸಿದರು.