ಬಹುಮುಖ ಪ್ರತಿಭೆ ರಾಕೇಶ್ ಕದ್ರಿ; ಗಿರಿಗಿಟ್ ಚಿತ್ರದ ರೂವಾರಿ

ಮಂಗಳೂರು:  ಈಗಿನ ಅತಿ ಯಶಸ್ವಿ ಸಿನಿಮಾ ಎಂದೇ ದಾಖಲಾಗಿ, ಯಶಸ್ವಿ 12ನೇ ವಾರದ ಪ್ರದರ್ಶನ ಕಾಣುತ್ತಾ 100 ದಿನಗಳ ಹತ್ತಿರಕ್ಕೆ ಸಾಗುತ್ತಿರುವ ಗಿರಿಗಿಟ್ ನಿರ್ದೇಶಕರಲ್ಲಿ ಒರ್ವರಾಗಿರುವ ರಾಕೇಶ್ ಕದ್ರಿ ಅವರ ಕೊಡುಗೆಯೂ ಸಿನಿಮಾದ ಯಶಸ್ವಿನಲ್ಲಿದೆ.

ಎಂಜಿನಿಯರಿಂಗ್ ಪದವೀಧರರಾಗಿರುವ ಇವರು ಮುಂಬಯಿಯಲ್ಲೂ ಸಲ್ಪ ಕಾಲ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಅಲ್ಲಿ ಕೆಲವು ಹಿಂದಿ, ಮರಾಠಿ ಸಿನಿಮಾ ಮತ್ತು ಕಿರುಚಿತ್ರ ಕೆಲಸ ಮಾಡಿ ಶಹಬಾಸ್ ಗಿಟ್ಟಿಸಿಕೊಂಡಿದ್ದಾರೆ. ಆ ಪೈಕಿ ಸೈಕಿ, ಅಂತರ್ಯ ಮಾರ್ಕೆಟ್ ಮುಂತಾದವು ಪ್ರಮುಖವಾದವು. 

ರಾಕೇಶ ಕದ್ರಿ ಅವರು ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾ ದಲ್ಲೂ ಅಸಿಸ್ಟೆಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸದ್ಯವೆ ಬಿಡುಗಡೆ ಆಗಲಿರುವ ರಡ್ಟ್ ಎಕ್ರೆ ಸಿನಿಮಾದಲ್ಲೂ ಇವರು ವಿಸ್ಮಯ ವಿನಾಯಕ ಜತೆ ಚಿತ್ರಕಥೆ ಬರೆದಿದ್ದು. ಸಹಾಯಕ ನಿದೇಶಕನಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ಪತ್ತೀಸ್‌ಗ್ಯಾಂಗ್ ಮತ್ತು ರಾಹುಕಾಲ ಗುಳಿಗ ಕಾಲ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.

ಗಿರಿಗಿಟ್ ಸಿನಿಮಾದ ಯಶಸ್ವಿನಲ್ಲಿ ಇವರ ಕೊಡುಗೆಯೂ ಇದೆ ಎಂಬುದು ಖಚಿತ. ಅದರ ಮತ್ತೋರ್ವ ನಿರ್ದೇಶಕ ರೂಪೇಶ್ ಶೆಟ್ಟಿ ಜತೆಯಲ್ಲಿ ಇವರು ಮಾಡಿರುವ ಕೆಲಸ ಮೆಚ್ಚತಕ್ಕದ್ದು ಇದು ಇದರಲ್ಲಿ ಪ್ರತಿಭೆಯನ್ನು ಸಾಬೀತು ಮಾಡುತ್ತದೆ.  ಗಿರಿಗಿಟ್ ಸಿನಿಮಾದ ಯಶಸ್ಸಿಗೆ ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ ಮತ್ತ ವಿನೀತ್ ಅವರು ಬರೆದ ಚಿತ್ರಕತೆ ಕೂಡಾ ಯಶಸ್ಸಿಗೆ ಒಂದು ಕಾರಣವಾಗಿದೆ. 

ರಾಕೇಶ್ ಕದ್ರಿ ಪ್ರಚಾರ ಬಯಸದ ಪ್ರತಿಭಾವಂತ ಹೀಗಾಗಿ ಗಿರಿಗಿಟ್ ಸಿನಿಮಾ ಯಶಸ್ವಿಯಾದರೂ ಅವರ ಹೆಸರು ಹೆಚ್ಚು ಬೆಳಕಿಗೆ ಬರಲಿಲ್ಲ.  ಸಿನಿಮಾದ ಬಗ್ಗೆ ಅವರಿಗೆ ಶ್ರದ್ಧೆಯಿದೆ. ನಾವು ಮಾಡುವ ಕೆಲಸವನ್ನೇ ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ ಎನ್ನಾತ್ತಾರೆ ರಾಕೇಶ್ ಕದ್ರಿ. 

ಗಿರಿಗಿಟ್ ಸಿನಿಮಾದ ಬಳಿಕ ಅವರು ಪೂರ್ಣ ಪ್ರಮಾಣದಲ್ಲಿ ಏಕಾಂಗಿಯಾಗಿ ಸಿನಿಮಾ ನಿರ್ದೇಶಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಅಂತಹ ಅವಕಾಶಗಳು ಅವರಿಗೆ ದೊರೆಯಲಿ ಎಂದು ನಾವು ಹಾರೈಸುವ..


Share