ಬೈಂದೂರು: ಯುವ ಚಂಡೆ ಬಳಗದ ’ಲೋಗೋ’ ಲೋಕಾರ್ಪಣೆ

ಬೈಂದೂರು: ದೇವಾಡಿಗರ ಒಕ್ಕೂಟ (ರಿ.)ಬೈಂದೂರು ಇದರ ನವೆಂಬರ್ ತಿಂಗಳ ಮಾಸಿಕ ಸಭೆ ಇಂದು ಸಂಜೆ ಶ್ರೀ ಮಹಾಸತೀ ಅಮ್ಮನವರ ದೇವಸ್ಥಾನ, ವತ್ತಿನಕಟ್ಟೆ ಇಲ್ಲಿ ನಡೆಯಿತು.

ಶ್ರೀ ನಾರಾಯಣ ದೇವಾಡಿಗ ಬಸವನಕೆರೆ ಇವರು  ಅಧ್ಯಕ್ಷತೆ ವಹಿಸಿದ್ದರು. ಯುವ ಚಂಡೆಬಳಗದ ’ಲೋಗೋ’ವನ್ನು ಲೋಕಾರ್ಪಣೆ ಮಾಡಲಾಯಿತು. 

ಚಂಡೆ ಸುರಕ್ಷತೆ ದೃಷ್ಟಿಯಿಂದ ತಯಾರಿಸಿದ ನವೀನ ವಿನ್ಯಾಸದ ಅಲ್ಮೇರಾ ಕೀ ಯನ್ನು ಯುವ ಚಂಡೆಬಳಗದ ರೂವಾರಿ ಅಮರ್ ದೇವಾಡಿಗರಿಗೆ ಹಸ್ತಾಂತರಿಸಲಾಯಿತು. 

ಒಕ್ಕೂಟದ ಮಾಜಿ ಅಧ್ಯಕ್ಷ ಶ್ರೀ ಕೆ.ಜಿ ಸುಬ್ಬ ದೇವಾಡಿಗ; ಉಪಾಧ್ಯಕ್ಷ ಶ್ರೀ ಮಣಿಕಂಠ ದೇವಾಡಿಗ, ಬೈಂದೂರು; ಮಾಜಿ ಕಾರ್ಯದರ್ಶಿ ಶ್ರೀ ಸತ್ಯಪ್ರಸನ್ನ, ಸಂಘಟನಾ ಕಾರ್ಯದರ್ಶಿ; ಶ್ರೀ ಮಹಾಲಿಂಗ ದೇವಾಡಿಗ, ಜೊತೆ ಕಾರ್ಯದರ್ಶಿ; ಶ್ರೀ ನಟರಾಜ್ ಬೈಂದೂರು; ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ದೇವಾಡಿಗ; ಕಾರ್ಯದರ್ಶಿ ಶ್ರೀಮತಿ ಸುಶೀಲ ದೇವಾಡಿಗ ಹಾಜರಿದ್ದರು. 

ಒಕ್ಕೂಟದ ಗೌರವಾನ್ವಿತ ಹಿರಿಯ ಸದಸ್ಯರು,ಮಹಿಳಾ ಘಟಕದ ಸದಸ್ಯೆಯರು ಹಾಗೂ ಒಕ್ಕೂಟದ ವಿವಿಧ ಪದಾಧಿಕಾರಿಗಳು ಹಾಜರಿದ್ದು ಯುವಚಂಡೆ ಬಳಗಕ್ಕೆ ಶುಭ ಹಾರೈಸಿದರು. ಡಿಸೆಂಬರ್ 7 ರಂದು DNSಬೆಂಗಳೂರು ಇವರಲ್ಲಿಗೆ ಕಾರ್ಯಕ್ರಮ ನೀಡಲು ಹೋಗುತ್ತಿರುವ ಚಂಡೆ ಬಳಗವು ಉತ್ತಮ ಪ್ರದರ್ಶನ ನೀಡುವ ಆಶ್ವಾಸನೆ ನೀಡಿತು. 

ವಿವಿಧ ವಿಷಯಗಳ ಸವಿಸ್ತಾರ ಚರ್ಚೆ ನಡೆಯಿತು. ಕಾರ್ಯದರ್ಶಿ ಶ್ರೀ ಚಂದ್ರದೇವಾಡಿಗರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.      

ವರದಿ-ಚಿತ್ರ: ಅಧ್ಯಕ್ಷರು & ಕಾರ್ಯದರ್ಶಿ,
ಸರ್ವ ಪದಾಧಿಕಾರಿಗಳು ದೇವಾಡಿಗರ ಒಕ್ಕೂಟ (ರಿ.) ಬೈಂದೂರು
.


Share