ಬೈಂದೂರು: ಲಾವಣ್ಯದ ಹಿರಿಯ ಕಲಾವಿದ, ಖ್ಯಾತ ನಟರಾದ ಮಾಧವ ರಾವ್ ಇನ್ನಿಲ್ಲ

ಬೈಂದೂರು: ಯುವಕರಿಗೆ ಪ್ರೇರಣೆಯಾಗಿದ್ದ ಸಹೋದರ ಬಿ. ಮಾಧವ ರಾವ್ (76) .. ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ.

ಗೆಳೆಯರ ಬಳಗ ಹಾಗೂ ಲಾವಣ್ಯ ತಂಡಗಳಲ್ಲಿ ಪ್ರಮುಖ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಯಾವುದೇ ಪಾತ್ರವನ್ನೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ತಬಲಾ ವಾದಕ.. ಭಜನಾ ಹಾಡುಗಾರ.. ಅಲ್ಲದೇ ಪರಿಸರದ ಧಾರ್ಮಿಕ ಕಾರ್ಯಗಳಲ್ಲಿ ಮುಂದಾಳು.. ಒಂದೇ ಮಾತಲ್ಲಿ ಹೇಳಬೇಕೆಂದರೆ ಸಕಲಕಲಾವಲ್ಲಭ..
ಪಶುವೈದ್ಯ ಸಹಾಯಕರಾಗಿ ಗೌರವಯುತ ಬದುಕನ್ನು ಕಂಡು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದ ಮಾವನ ಆತ್ಮಕ್ಕೆ ಚಿರಶಾಂತಿ ಲಭಿಸಲಿ.

ದೇವಾಡಿಗ.ಕಾಮ್ ಬಳಗ

ಕಲೆ-ಸಾಂಸ್ಕೃತಿಕ ಸೇವೆಯಲ್ಲಿ ಬದುಕಿನ ಸೊಗಸನ್ನು ಕಂಡ ಮಾಧವ ರಾವ್ (Clik this Link)

​​​​​​​


Share