ತುಳು ಸಿನೆಮಾ: ಕೆಲವೇ ದಿನಗಳಲ್ಲಿ ತೆರೆಕಾಣಲಿರುವ “ಇಂಗ್ಲೀಷ್‌’ ಹೊಸ ನಿರೀಕ್ಷೆ ಮೂಡಿಸಿದೆ

ಮಂಗಳೂರು: ತುಳು ಸಿನೆಮಾಗಳ ಪಾಲಿಗೆ ಕೆಲವೇ ದಿನಗಳಲ್ಲಿ ತೆರೆಕಾಣಲಿರುವ “ಇಂಗ್ಲೀಷ್‌’ ಹೊಸ ನಿರೀಕ್ಷೆ ಮೂಡಿಸಿದೆ. ಕೋಸ್ಟಲ್‌ವುಡ್‌ಗೆ ಈ ಸಿನೆಮಾ ಮಹತ್ತರ ಕೊಡುಗೆ ನೀಡುವ ಹುಮ್ಮಸ್ಸಿನಲ್ಲಿದೆ.

ಹಲವು ಸಿನೆಮಾಗಳ ಮೂಲಕ ತುಳು ಚಿತ್ರರಂಗದಲ್ಲಿ ಮೇರುಸ್ತರದಲ್ಲಿ ನಿಲ್ಲುತ್ತಿರುವ ಸೂರಜ್‌ ಶೆಟ್ಟಿ ಅವರ ನಿರ್ದೇಶನದ ಇಂಗ್ಲಿಷ್‌ ಸಿನೆಮಾ ಕೆಲವೇ ದಿನಗಳ ಒಳಗೆ ಬಿಡುಗಡೆ ಆಗಲಿದೆ. ಹರೀಶ್‌ ಶೇರಿಗಾರ್‌ ಹಾಗೂ ಶರ್ಮಿಳಾ ಶೇರಿಗಾರ್‌ ಅವರ ನಿರ್ಮಾಣದಲ್ಲಿ ಸಿನೆಮಾ ಅದ್ದೂರಿಯಾಗಿ ಸಿದ್ಧವಾಗಿದೆ. ಭಾರಿ ಪ್ರಯತ್ನಪಟ್ಟು ಇಂಗ್ಲಿಷ್‌ ಕಲಿಯುವುದೇ ಈ ಸಿನೆಮಾದ ಪ್ರಮುಖ ವಿಷಯ. ಪರಿಶ್ರಮದಿಂದ ಏನನ್ನೂ ಮಾಡಬಹುದು ಎಂಬ ಸಂದೇಶವನ್ನೂ ಹೊಂದಿರುವ ಈ ಸಿನೆಮಾದಲ್ಲಿ ಆ ಯುವಕನು ಇಂಗ್ಲಿಷ್‌ ಕಲಿಯಲು ಪಡುವ ಪಾಡು, ಆಕೆಯ ಮನ ಗೆಲ್ಲುವುದು ಮತ್ತು ಆಕೆಯ ಮನೆಯವರನ್ನೂ ಮದುವೆಗೆ ಒಪ್ಪಿಸಲು ಸಫಲವಾಗುವವರೆಗೆ ಸಾಗುವ ಕಥೆ ಅತ್ಯಂತ ಕುತೂಹಲದಿಂದ ಕೂಡಿದೆ. ಮಾಲ್‌ನಲ್ಲಿ ವೇಷ ಹಾಕಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ ಈತ ಏರುವ ಎತ್ತರ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.

 

ಕನ್ನಡದ ಹಿರಿಯ ಮತ್ತು ಖ್ಯಾತ ನಟ ಅನಂತನಾಗ್‌ ಅವರು ನಟಿಸಿರುವುದು ಈ ಚಿತ್ರದ ಪ್ಲಸ್‌ ಪಾಯಿಂಟ್‌. ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್‌, ನವ್ಯಾ ಪೂಜಾರಿ, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್‌, ದೀಪಕ್‌ ರೈ ಪಾಣಾಜೆ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ರವಿ ರಾಮಕುಂಜ ಮುಂತಾದವರಿದ್ದಾರೆ.

ಸೂರಜ್‌ ಶೆಟ್ಟಿ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಈ ಸಿನೆಮಾಕ್ಕೆ ಶಶಿರಾಜ್‌ ಕಾವೂರು ಮತ್ತು ಅರ್ಜುನ್‌ ಲೂಯಿಸ್‌ ಅವರ ಸಾಹಿತ್ಯವಿದೆ. ಕೃಷ್ಣ ಸಾರಥಿ ಅವರ ಛಾಯಾಗ್ರಹಣದಲ್ಲಿ ಮೂಡಿ ಬರುತ್ತಿರುವ ಇಂಗ್ಲಿಷ್‌ಗೆ ಮಣಿಕಾಂತ್‌ ಕದ್ರಿ ಅವರ ಸಂಗೀತವಿದೆ. ಮನು ಶೇರಿಗಾರ್‌ ಸಂಕಲನದಲ್ಲಿ ಕೈ ಜೋಡಿಸಿದ್ದಾರೆ.

ENGLISH (Tulu) - Official Jukebox | K.Sooraj Shetty | Manikanth Kadri | Aravind Bolar | Naveen Padil (click)

 


Share