An Open letter of Sri.M.Jayananda Devadiga on proposed GLOBAL Foundation -Vishwa Okkoota

 

ದೇವಾಡಿಗ ಗ್ಲೋಬಲ್ ಫೌಂಡೇಶನ್ (ಟ್ರಸ್ಟ್) ಮತ್ತು ವಿಶ್ವ ದೇವಾಡಿಗ ಒಕ್ಕೂಟ ಎರಡೂ ಅತೀ ಶೀಘ್ರದಲ್ಲಿ ಸ್ಥಾಪಿಸಲ್ಪಟ್ಟು ಪರಸ್ಪರ ಪೂರಕವಾಗಿ ದೇವಾಡಿಗ ಜಾತಿಯ ಹಿತಸಾಧಿಸಿ, ಜಾತಿಯ ಘನತೆ, ಗೌರವ, ಪ್ರತಿಷ್ಟತೆಯನ್ನು ಹೆಚ್ಚಿಸುವಂತಾಗಲಿ...."

ಯಂ.ಜಯಾನಂದ ದೇವಾಡಿಗ

ಡೋರ್ ನಂಬ್ರ: 2-23 ‘ಹರಿ ನಿಲಯ’ಆದರ್ಶ ಶಾಲೆಯ ಬಳಿ

ಅಳಪೆ ಕರ್ಮಾರ್, ಅಂಚೆ ಪಡೀಲು ಮಂಗಳೂರು- 575007

ಮೊಬೈಲ್ ಸಂಖ್ಯೆ : 9242750020
ಮಾನ್ಯ ಅಧ್ಯಕ್ಷರು(ಡಾ. ಕೆ.ದೇವರಾಜ್‍ರವರು)

ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ) ಮಂಗಳೂರು, ಸಮಾಜಭವನ,ಗಾಂದಿನಗರ ಮಂಗಳೂರು-575003

ಮಾನ್ಯರೇ,

 ನಾನು ನನ್ನ 19ನೇ ವರ್ಷ ಪ್ರಾಯದಿಂದ 58ನೇ ವರ್ಷ ಪ್ರಾಯದವರೆಗಿನ ಸುಮಾರು ನಾಲ್ಕು ದಶಕಗಳ (40 ವರ್ಷಗಳ) ಕಾಲ ನಿರಂತರವಾಗಿ ಮಂಗಳೂರು ಸಂಘದ ಕಾರ್ಯಕರ್ತನಾಗಿ ಕಿಂಚಿತ್ ದುಡಿಮೆ ಸಲ್ಲಿಸಿರುತ್ತೇನೆ.
ದಿನಾಂಕ 17-9-1992 ರಿಂದ ಸಂಘದ ಕೆಲಸ ಕಾರ್ಯಗಳಿಂದ ದೂರ ಉಳಿದಿದ್ದೇನೆ. ತಾವು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಸ್ ಚಂದ್ರ ಕಣ್ವತೀರ್ಥರವರು ತಾ. 20-12-2016 ರಂದು ಮಹತ್ವದ ಸಭೆ ಇದೆ ನೀವು ಬರಬೇಕೆಂದು ನನ್ನನ್ನು ಮೊದಲ ಬಾರಿಗೆ ಸ್ವತಹ ಕರೆದಿರುವಿರಿ ತಮಗಿಬ್ಬರಿಗೂ ನನ್ನ ಕೃತಜ್ಞತೆಗಳು.

ತಮ್ಮ ಕರೆಗೆ ಒಗೊಟ್ಟು ತಮಗೂ ಸಂಘಕ್ಕೂ ಗೌರವ ಸಲ್ಲಿಸುವ ಮತ್ತು ಮಹತ್ವದ ಸಭೆಯಲ್ಲಿ ಭಾಗವಹಿಸಬೇಕೆಂಬ ಸದಿಚ್ಚೆಯಿಂದ ನಾನು ಸಭೆಯಲ್ಲಿ ಭಾಗವಹಿಸಿದೆ. ನನಗೆ ವೇದಿಕೆಯಲ್ಲಿ ಸ್ಥಾನ ಕಲ್ಪಿಸಿದಿರಿ ಸಭೆಯಲ್ಲಿ ನನ್ನ ಬಂಧುಗಳು ನನಗೆ ತೋರಿಸಿದ ವಿಶ್ವಾಸ ನನಗೆ ಸಂತೋಷವನ್ನುಂಟು ಮಾಡಿದೆ ಎಲ್ಲರಿಗೂ ನನ್ನ ಕೃತಜ್ಞತೆಗಳು.

ತಾವು ಸಭೆಯಲ್ಲಿ ಆರು ವಿಷಯಗಳ ಕುರಿತು ಅಭಿಪ್ರಾಯ ನೀಡಬೇಕೆಂದು ಎಲ್ಲರನ್ನೂ ಕೇಳಿಕೊಂಡು ಪ್ರಥಮ ಸರದಿಯಲ್ಲಿ ಪ್ರತಿಯೊಬ್ಬರಿಗೂ ಮೂರು ನಿಮಿಷಗಳು, ಎರಡನೇ ಸರದಿಯಲ್ಲಿ ಎರಡು ನಿಮಿಷಗಳು, ಅವಕಾಶ ಎಂದು ನಿಗದಿಪಡಿಸಿದಿರಿ ಮೊದಲು ವಿದ್ಯಾರ್ಥಿ ವೇತನವನ್ನು ಕೇಂದ್ರಿಕೃತಗೊಳಿಸುವ ಏಜೆಂಡಾ ಎತ್ತಿಕೊಂಡಿರಿ.

ಸಭೆಯ ಏಜೆಂಡಾಗಳ ಕುರಿತು ಯಾವುದೇ ಮಾಹಿತಿ ನನಗಿರಲಿಲ್ಲ. ನಾನು ದೇವಾಡಿಗ ಗ್ಲೋಬಲ್ ಫೌಂಡೇಶನ್(ಟ್ರಸ್ಟ್) ಅಥವಾ ದೇವಾಡಿಗ ಒಕ್ಕೂಟದ ವಿಚಾರ ಎತ್ತಿಕೊಳ್ಳೋಣ. ಟ್ರಸ್ಟ್ ಅಥವಾ ಒಕ್ಕೂಟ ರಚನೆ ಆದ ನಂತರ ಇತರ ಏಜೆಂಡಾಗಳು ಗಮನಿಸುವಂತದ್ದು. ಟ್ರಸ್ಟ್ ಅಥವಾ ಒಕ್ಕೂಟ ಆಗದಿದ್ದಲ್ಲಿ ಕೋರ್‍ಕಮಿಟಿ ರಚಿಸುವ. ಟ್ರಸ್ಟ್ ಅಥವಾ ಒಕ್ಕೂಟ ಈಗಿರುವ ಎಲ್ಲಾ ಸಂಘಗಳಿಗೂ, ಪ್ರತಿಯೊಬ್ಬ ದೇವಾಡಿಗ ಬಂಧುವಿಗೂ ಅವಕಾಶವಿದ್ದು ಪ್ರಜಾಪ್ರಭುತ್ವ ರೀತಿಯಲ್ಲಿ ಆಗಬೇಕು. ಎಲ್ಲಾ ಸಂಘಗಳಿಗೂ, ಎಲ್ಲ ಭಾಂಧವರಿಗೂ ಅಧಿಕಾರ ಅವಕಾಶವಿರಬೇಕು. ಟ್ರಸ್ಟಿನಲ್ಲಿ ಇದಕ್ಕೆ ಅವಕಾಶವಿಲ್ಲ. ಒಕ್ಕೂಟದಲ್ಲಿ ಕೆಲ ಕಾನೂನಿನ ಅಡಚಣೆ ಇದೆ ಅದನ್ನು ಸರಿಪಡಿಸಬಹುದು ಒಕ್ಕೂಟ ರಚಿಸಿವುದು ಉತ್ತಮ. ಪ್ರಜಾಪ್ರಭುತ್ವ ರೀತಿಯಲ್ಲಿ ದೇಶದ ಸಂವಿಧಾನಕ್ಕೆ ಬದ್ಧವಾಗಿ ಒಕ್ಕೂಟ ರಚನೆ ಆಗಬೇಕು. ಇಲ್ಲವಾದಲ್ಲಿ ಪ್ರತಿಭಟಿಸುತ್ತೇನೆ ಎಂದು ನನ್ನ ಅಭಿಪ್ರಾಯ ನೀಡಿದೆ.
ಆ ನಂತರ ನ್ಯಾಯವಾದಿ ಶ್ರೀ ರವೀಂದ್ ಮೊೈಲಿ ಕಾರ್ಕಳ, ಶ್ರೀ ವಸಂತ ಕುಮಾರ್ ನಿಟ್ಟೆ, ಉಡುಪಿಯ ಡಾ.ಬಿ.ಎಸ್.ಶೇರಿಗಾರ್, ಶ್ರೀ ಬಿ.ಜಿ.ಮೋಹನ್ ದಾಸ್,  ಶ್ರೀ ಸುಂದರ ಮೊೈಲಿ, ಶ್ರೀ ಪಿ. ಶ್ರೀನಿವಾಸ್ ದೇವಾಡಿಗ, ಶ್ರೀ ಗಣೇಶ್ ಮಾಜಿ ಅಧ್ಯಕ್ಷರು, ಶ್ರೀ ಶ್ರೀಧರ ದೇವಾಡಿಗ, ಶ್ರೀ ರತ್ನಾಕರ ಬೈಲೂರು, ಶ್ರೀ ಹರೀಶ್ ಶೇರಿಗಾರ್, ಶ್ರೀ ಸೀತಾರಾಮ ದೇವಾಡಿಗ, ಹಾಲಿ ಅಧ್ಯಕ್ಷರು, ಶ್ರೀ ಪ್ರವೀಣ್, ಶ್ರೀ ದಿವಾಕರ ದೇವಾಡಿಗ (ಮುಂಬೈ ಸಂಘದ ಮಾಜಿ ಅಧ್ಯಕ್ಷರು) ಶ್ರೀ ಜಿ.ರಾಘವೇಂದ್ರ ಹಿರಿಯಡಕ, ಶ್ರೀ ರಾಜೀವ ದೇವಾಡಿಗ ತ್ರಾಸಿ, ಶ್ರೀಮತಿ ಗೌರಿ ಉಪ್ಪುಂದ, ಶ್ರೀಮತಿ ಗೀತಾ ಕಲ್ಯಾಣಪುರ, ಶ್ರೀ.ಬಿ.ಜನಾರ್ಧನ ಉಪ್ಪುಂದ, ಶ್ರೀ ಸುರೇಶ್ ಪಡುಕೋಣೆ, ಮುಂಬೈ, ಶ್ರೀ ಅಣ್ಣಯ್ಯ ದೇವಾಡಿಗ ಬಾರಕೂರು, ಶ್ರೀ ಗಣೇಶ್ ಮುಂಬೈ, ಶ್ರೀ ಎಚ್. ಮೋಹನ್‍ದಾಸ್ ಮುಂಬೈ, ಬೆಂಗಳೂರಿನ ಶ್ರೀ ರಮೇಶ್ ದೇವಾಡಿಗ, ಶ್ರೀ ಚಂದ್ರಶೇಖರ, ಶ್ರೀ ರವಿ ತಲ್ಲೂರು, ಶ್ರೀ ಯಸ್.ಕೆ. ಶ್ರೀಯಾನ್ ಮುಂಬೈ, ಶ್ರೀ ರತ್ನಾಕರ ಮಂಗಳೂರು ಅಲ್ಲದೆ ನನಗೆ ಮುಖ ಪರಿಚಯವಿದ್ದರೂ ಸರಿಯಾಗಿ ಹೆಸರು ಗೊತ್ತಿಲ್ಲದ ಕೆಲವರು ಯುವಜನ ಬಂಧುಗಳು ಮತ್ತು ಹಿರಿಯ ಬಂಧುಗಳು ಅಭಿಪ್ರಾಯ ನೀಡಿರುತ್ತಾರೆ.

ಸಭೆಯು ಕ್ರಿಯಾಶೀಲವಾಗಿ ನಡೆದಿದೆ. ಇದು ಉತ್ತಮ ಬೆಳವಣಿಗೆ. ಸಭೆಯು ಐದು ವಿಷಯಗಳ ಬಗ್ಗೆ ವಿಷಯಾಧಾರಿತ ಅಭಿಪ್ರಾಯಗಳ ಕೊರತೆಯಿಂದ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಟ್ರಸ್ಟಿನ ಮತ್ತು ಒಕ್ಕೂಟದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗದಿರುವುದು ತೀರ್ಮಾನಕ್ಕೆ ಬಾರದಿರಲು ಕಾರಣವಾಗಿರಬಹುದು. ಸಭೆಯನ್ನು ಸಂಘಟಿಸುವಲ್ಲಿ, ಸಂಘಟಕರ ಪ್ರಯತ್ನವೂ ಶ್ಲಾಘನೀಯ.

ಕೊನೆಗೆ ಸಭೆಯಲ್ಲಿ ಸರ್ವ ಶ್ರೀಗಳಾದ ಡಾ.ಕೆ.ದೇವರಾಜ್ ( ತಾವು) ಶ್ರೀ ಧರ್ಮಪಾಲ್, ಶ್ರೀ ಹರೀಶ್ ಶೇರಿಗಾರ್ ದುಬೈ, ಶ್ರೀ ನಾರಯಣ ದೇವಾಡಿಗ ದುಬೈ, ಡಾಕ್ಟರ್.ಕೆ.ವಿ ದೇವಾಡಿಗ, ಡಾ. ಬಿ.ಎಸ್.ಶೇರಿಗಾರ್, ಶ್ರೀ ಚಂದ್ರಶೆಖರ ಬೆಂಗಳೂರು, ಶ್ರೀ ರವೀಂದ್ರ ಮೊೈಲಿ ನ್ಯಾಯವಾದಿ ಕಾರ್ಕಳ, ಶ್ರೀ .ಪಿ ಶ್ರೀನಿವಾಸ್ ದೇವಾಡಿಗ, ಶ್ರೀ ವಾಮನ ಮರೋಳಿ, ಶ್ರೀ ರವಿ ದೇವಾಡಿಗ ಮುಂಬೈ, ಶ್ರೀ ಎಚ್.ಮೋಹನ್‍ದಾಸ್ ಮುಂಬೈ, ಶ್ರೀ ದುಬೈ ದಿನೇಶ್ ದೇವಾಡಿಗ, ಶ್ರೀ.ಎಂ.ಜಯಾನಂದ ದೇವಾಡಿಗ, ಶ್ರೀ..... ( ನನಗೆ ಹೆಸರು ನೆನಪಿಲ್ಲ) ಹೀಗೆ ಹದಿನೈದು ಮಂದಿಯ ಕೋರ್ಕಮಿಟಿ ರಚಿಸಲಾಯಿತು. ಸಭೆಯು ಕೊನೆಗೊಂಡಿತು.

ಸಭೆಯಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಜನಕರಲ್ಲೊಬ್ಬರಾದ ಡಾ. ಬಿ.ಎಸ್.ಶೇರಿಗಾರ್ ರವರು ನನಗೆ ಅವರಲ್ಲಿದ್ದ ‘ದೇವಾಡಿಗ ಗ್ಲೋಬಲ್ ಫೌಂಡೆಶನ್’ನ (ಟ್ರಸ್ಟ್) ಡೀಡ್ ಆಫ್ ಡಿಕ್ಲೇರೇಶನ್ ಆಫ್ ಚಾರಿಟೇಬಲ್ ಟ್ರಸ್ಟ್ ಮತ್ತು ‘ ವಿಶ್ವ ದೇವಾಡಿಗ ಒಕ್ಕೂಟ’ ದ ಮೆಮೊರೆಂಡಮ್ ಆಫ್ ಅಸೋಸೊಯೆಶನ್, ರೂಲ್ಸ್ ಎಂಡ್ ರೆಗ್ಯೂಲೇಶನ್ ಕೊಟ್ಟರು. ನನ್ನ ಅಭಿಪ್ರಾಯ ಬೇಕೆಂದರು ಅವರು ಸಭೆಯಲ್ಲಿ ಮಾತಾಡುತ್ತಾ ನಾನು ಮತ್ತು ನ್ಯಾಯವಾದಿ ಶ್ರೀ ರವೀಂದ್ರ ಮೊೈಲಿಯವರು ಕಾನೂನಿನ ಅನುಭವವಿದ್ದವರು ಎಂದು ಹೇಳಿದ್ದರು.
ನಾನು ಎರಡನ್ನೂ ಪರಿಶೀಲಿಸಿದೆ. ದೇವಾಡಿಗ ಗ್ಲೋಬಲ್ ಫೌಂಡೆಶನ್(ಟ್ರಸ್ಟ್), ಟ್ರಸ್ಟ ಕಾಯಿದೆಯಂತೆ ರಿಜಿಸ್ಟ್ರಿ(ನೋಂದಾವಣೆ) ಆಗುವಂತಾದ್ದಾಗಿದೆ. ವಿಶ್ವ ದೇವಾಡಿಗ ಒಕ್ಕೂಟವು, ಕರ್ನಾಟಕ ಸೊಸಾೈಟೀಸ್ ರಿಜಿಸ್ಟ್ರೇಶನ್ ಕಾಯಿದೆಯಂತೆ ರಿಜಿಸ್ಟ್ರಿ (ನೋಂದಾವಣೆ ) ಆಗುವಂತದ್ದಾಗಿದೆ.

ಗ್ಲೋಬಲ್ ಫ಼ೌಂಡೇಶನ್ ಟ್ರಸ್ಟ್,:

ಡಾ. ಬಿ.ಎಸ್.ಶೇರಿಗಾರ್, ಶ್ರೀ ಅತ್ತವಾರ ದಿನಕರ ಮತ್ತು ಡಾ.ಕೆ,ದೇವರಾಜ್ (ತಾವು) ಜನಕರಾಗಿ ನೇಮಿಸುವ ಹನ್ನೆರಡು ಮಂದಿ ಟ್ರಸ್ಟಿಗಳ ಸಂಪೂರ್ಣ, ಸ್ವತಂತ್ರ ಆಡಳಿತಕ್ಕೆ ಒಳಪಡುವುದಾಗಿದೆ. ಮುಂದೆ ಅಗತ್ಯವಿದ್ದರೆ ಹನ್ನೆರಡು ಮಂದಿ ಟ್ರಸ್ಟಿಗಳು ಹೊಸತಾಗಿ ಎಂಟು ಮಂದಿ ಟ್ರಸ್ಟಿಗಳನ್ನು ಕೋ-ಒಪ್ಟ್ ಮಾಡಿಕೊಳ್ಳುವರೇ ಅವಕಾಶವಿದೆ.

ಟ್ರಸ್ಟಿಗಳು ಮೂರು ವರ್ಷದ ಅವದಿಗೆü ಹೊಂದಿರುತ್ತಾರೆ. ಮೂರು ವರ್ಷಗಳ ನಂತರ 1/3 ಅಂಶದಷ್ಟು ಟ್ರಸ್ಟಿಗಳು ನಿವೃತ್ತಿ ಹೊಂದಲಿದ್ದು, ಮರುಆಯ್ಕೆ ಹೊಂದಬಹುದಾಗಿದೆ. ಟ್ರಸ್ಟಿಗಳು ಟ್ರಸ್ಟಿಗೆ ಕೊಡುಗೆ ರೂಪದಲ್ಲಿ ಲಕ್ಷಾಂತರ ಹಣ ಹೂಡಬೇಕು ಅದೆಷ್ಟೆಂದೂ ನಿಗದಿ ಆಗಿರುವುದಿಲ್ಲ. ಅತೀ ಶೀಘ್ರದಲ್ಲಿ ಟ್ರಸ್ಟ್ ರೂಫಾಯಿ ಹತ್ತು ಕೋಟಿಯ ನಿಧಿ ಹೊಂದಬೇಕಾಗಿದೆ ಎಂದು ತಿಳಿದು ಬಂದಿದೆ.

ಟ್ರಸ್ಟ್, ಈಗಿರುವ ದೇವಾಡಿಗರ ಎಲ್ಲಾ ಸಂಘಗಳ ಲೀಸ್ಟ್ ಮಾಡಿ ಸಂಘಗಳು ಸರದಿಯಂತೆ, ಮೂರು ವರ್ಷದ ಅವಧಿಗೆ ಐದು ಮಂದಿ ಟ್ರಸ್ಟಿಗಳನ್ನು ನಾಮ ನಿರ್ದೇಶನ ಮಾಡಬೇಕಾಗಿದೆ. ಈ ಐದು ಮಂದಿಗೆ ಮರುನೇಮಕಾತಿಗೆ ಅವಕಾಶವಿಲ್ಲ. ಸಂಘಗಳು ಟ್ರಸ್ಟಿಗೆ ಕಾನೂನಿನಂತೆ ಹಣ ಹೂಡುವಂತಿಲ್ಲ. ಹೂಡಲು ಆರ್ಥಿಕ ಪರಿಸ್ಥಿತಿಯಿಂದಾಗಿ ಸಾಧ್ಯತೆಯೂ ಕಡಿಮೆ. ಸಂಘಗಳ ಪರವಾಗಿ ಟ್ರಸ್ಟಿಗಳಾಗುವವರು ಪ್ರಕೃತ ಲಕ್ಷಾಂತರ ಹಣ ಹೂಡುವವರು ಕಂಡುಬರುವುದಿಲ್ಲ. ಹನ್ನೆರಡು ಮಂದಿ ಟ್ರಸ್ಟಿಗಳೂ ತಲಾ ರೂಪಾಯಿ ಹತ್ತು ಲಕ್ಷ ಹೂಡಿದರೂ ರೂಪಾಯಿ ಒಂದು ಕೋಟಿ ಇಪ್ಪತ್ತು ಲಕ್ಷ ಆಗುವುದು. ಪರಿಣಾಮವಾಗಿ ಸಂಘಗಳ ಪರವಾದ ಟ್ರಸ್ಟಿಗಳು ಹೆಸರಿಗೆ ಮಾತ್ರ ಟ್ರಸ್ಟಿಗಳು ಆಗುವಂತಾಗುತ್ತದೆ. ಎಲ್ಲಾ ಸಂಘಗಳಿಗೂ ಅವಕಾಶ ಸಿಗುವಾಗ 24 ರಿಂದ 27 ವರ್ಷಗಳಾಗುತ್ತದೆ ಎಂಬುದನ್ನು ಗಮನಿಸಬೇಕು.

ಟ್ರಸ್ಟ್, ಸಂಘಗಳು ಹೊಂದಿರುವ ಉದ್ದೇಶಗಳನ್ನು ಅಲ್ಲದೆ ಕೆಲ ಘನ ಉದ್ದೇಶಗಳನ್ನು ಹೊಂದಿದೆ.

ಟ್ರಸ್ಟ್, ಟ್ರಸ್ಟ್ ಡೀಡ್ ನಂತೆ 2012 ರ ಸೆಪ್ಟೆಂಬರ್30 ರಂದು ಆಸ್ತಿತ್ವಕ್ಕೆ ಬಂದು,2013ರ ಸೆಪ್ಟೆಂಬರ್30 ರಂದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿದ್ದು, 4 ವರ್ಷಗಳೂ ಕಳೆದರೂ ಟ್ರಸ್ಟ್ ಯಾಕೆ ಆಸ್ತಿತ್ವಕ್ಕೆ ಬರಲಿಲ್ಲ? ಹನ್ನೆರಡು ಮಂದಿ ಹಣ ಹೂಡುವ ಟ್ರಸ್ಟಿಗಳು ಸಿಗಲಿಲ್ಲವೇ?

ಟ್ರಸ್ಟಿನ ಜನಕರು ನೇಮಿಸುವ ಬರಿ ಹನ್ನೆರಡು ಮಂದಿಯ ಸ್ವತಂತ್ರ ಟ್ರಸ್ಟಾಗಿದ್ದು ಟ್ರಸ್ಟಿನಲ್ಲಿ ಟ್ರಸ್ಟಿಗಳಿಗಳಗಲ್ಲದೆ ಬೇರೆ ಯಾರಿಗೂ ಏನು ಸಂ¨ಂಧವಿಲ್ಲ ಅಲ್ಲದೆ ಸ್ವಲ್ಪ ಹಣ ನೀಡಿ ಟ್ರಸ್ಟಿಗಳಾಗಲೂ ಪ್ರಶ್ನೆ ಕೇಳಲೂ ಅವಕಾಶವೇ ಇಲ್ಲ ಆಗಿರುವಾಗ ಸಂಘಗಳ ಮತ್ತು ಬೇರೆ ದೇವಾಡಿಗ ಭಾಂಧವರ ಅಭಿಪ್ರಾಯ ಯಾಕೆ ಬೇಕು? ಇಂತಿರಲು ಟ್ರಸ್ಟಿನ ವಿಚಾರದಲ್ಲಿ ಸಂಘಗಳ ಮತ್ತು ಬೇರೆ ದೇವಾಡಿಗ ಭಾಂಧವರ ಸಭೆ ಕರೆಯುವ ಸಭೆ ಕರೆಯುವ ಅವಶ್ಯಕತೆ ಇದೆಯೇ? ಸಂಘಗಳು ಸರದಿಯಂತೆ ಮೂರು ವರ್ಷಗಳ ಅವಧಿಗೆ ನಾಮನಿರ್ದೇಶನ ಂಆಡುವ ಐದು ಮಂದಿ ಟ್ರಸ್ಟಿಗಳ ಅವಶ್ಯಕತೆ ಏನು? ಅವರು ಪೂರ್ಣ ಪ್ರಮಾಣದ ಟ್ರಸ್ಟಿಗಳೇ? ಅವರು ಹಣ ಹೂಡದಿದ್ದರೆ ಟ್ರಸ್ಟಿಗಳಾಗುವರೇ? ಅವರಿಲ್ಲದೆ ಟ್ರಸ್ಟ್ ಸ್ಥಾಪಿಸಲಾಗುವುದಿಲ್ಲವೆ? ಸಂಘಗಳು ಐದು ಮಂದಿ ಟ್ರಸ್ಟಿಗಳನ್ನು ನಾಮನಿರ್ದೇಶನ ಮಾಡುವಲ್ಲಿ ಟ್ರಸ್ಟಿನ ವಿಚಾರದಲ್ಲಿ ಸಂಘಗಳಿಗೆ ಏನನ್ನಾದರೂ ಹೇಳಲು, ಪರಿಶೀಲಿಸಲು ಅವಕಾಶ ಇದೆಯೇ? ವಾಸ್ತವವಾಗಿ ಆ ಟ್ರಸ್ಟಿಗಳು, ಅವರನ್ನು ನಾಮನಿರ್ದೇಶನ ಮಢಡುವ ಸಂಘಗಳು ಯಾವುದೇ ಅವಕಾಶವಿಲ್ಲದೆ ಬರೇ ಹೆಸರಿಗೆ ಮಾತ್ರ ತಾನೇ?
ಮೇಲಿನ ವಿಚಾರಗಳನ್ನು ಪರಿಶೀಲಿಸುವಾಗ ಟ್ರಸ್ಟ್, ಸಂಘಗಳನ್ನು ತನ್ನ ಹಿಡಿತಕ್ಕೆ ಒಳಪಡಿಸಿ, ಮುಂದೆ ದೇವಾಡಿಗ ಜಾತಿಯ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆ ಆಗಬೇಕೆಂಬ ಉದ್ದೇಶ ಇದ್ದಂತೆ ಇದೆಯೆಂದು ಕೆಲವರು ಹೇಳುತ್ತಿದ್ದಾರೆ. ಈ ಕುರಿತು ಮೇಲಿನ ವಿಚಾರಗಳ ಕುರಿತು ಸ್ಪಷ್ಟೀಕರಣ ಅಗತ್ಯವಿದೆ. ದೇವಾಡಿಗ ಗ್ಲೋಬಲ್ ಫೌಂಡೇಶನ್ (ಟ್ರಸ್ಟ್)ನ ಜನಕರು, ಪ್ರತಿಪಾದಕರು ಮತ್ತು ಹನ್ನೆರಡು ಮದಿ ಹಣ ಹೂಡಿ ಟ್ರಸ್ಟಿಗಳಾಗುವ ನಿಜವಾದ ಸಮಾಜ ಅಭಿಮಾನಿಗಳು. ಸ್ಪಷ್ಟೀಕರಣ ನೀಡುವುದು ಜಾತಿಯ ಹಿತದೃಷ್ಟಿಯಿಂದ ಟ್ರಸ್ಟಿನ ಸರಿಯಾದ ಮಾಹಿತಿಯನ್ನು ಸಂಘಗಳು ಮತ್ತು ಜಾತಿ ಭಾಂಧವರು ಅರಿತುಕೊಳ್ಳುವ ದಿಸೆಯಿಂದ ಒಳ್ಳೆಯದು.

ಟ್ರಸ್ಟಿನ ಟ್ರಸ್ಟಿಗಳಾಗುವ ಹನ್ನೆರಡು ಮದಿಯ ಹೆಸರುಗಳನ್ನು ಪ್ರಕಟಿಸುವುದು ಟ್ರಸ್ಟಿನ ಬಗ್ಗೆ ಎಲ್ಲರಿಗೂ ಅಭಿಮಾನ ಉಂಟಾಗುವಂತೆ ಮಾಡುವಲ್ಲಿ ಅತಿ ಅಗತ್ಯ. ಹನ್ನೆರಡು ಮಂದಿ ಟ್ರಸ್ಟಿಗಳು ಯಾರೇ ಆದರೂ ಟ್ರಸ್ಟಿನ ಸಾಮಾನ್ಯ ಆಡಳಿತ ನಡೆಸಬಹುದಾದರೂ ದಿನನಿತ್ಯದ ಆಡಳಿತ ನಡೆಸುವುದು ವ್ಯವಹರಿಸಿವುದು ಕಷ್ಟಸಾಧ್ಯ ಟ್ರಸ್ಟಿನ ಉದ್ಧೇಶಗಳ ಸಾಧನೆಗಾಗಿ ಟ್ರಸ್ಟಿಗೆ ಆರ್ಥಿಕ ನಿರ್ವಹಣೆ, ಅಭಿವೃದ್ಧಿ ಸಾಧನೆ, ಕಾನೂನಿನ ಪರಿಜ್ಞಾನ. ಸಾಮಾಜಿಕ ಚಿಂತನೆ, ಸಾಮಾಜಿಕ ಕಳಕಳಿ ಎಲ್ಲರ ಬಗ್ಗೆ ಗೌರವ ಭಾವನೆ ಯಾರ ಬಗ್ಗೆಯೂ ಕೀಳರಿಮೆ ಇಲ್ಲದಿರುವುಕ್ಕೆ ಅಲ್ಲಿ ನಾನು ಎನ್ನದೆ ನಾವು ಎಂಬ ಮನೋಭಾವನೆಯಿಂದ ಎಲ್ಲರನ್ನೂ ಕಟ್ಟಿಕೊಂಡು ಹೋಗುವ, ಬಹುಜನರ ಸಂಪರ್ಕವುಳ್ಳ, ಟ್ರಸ್ಟಿಯ ನಿದಿಯನ್ನು ವೃದ್ಧಿಗೊಳಿಸುವ ಚಾಕಚಕ್ಯತೆವುಳ್ಳ. ಕ್ರಿಯಾಶೀಲ ಸಮರ್ಥ ವ್ಯಕ್ತಿಯೊಬ್ಬರ ಅವಶ್ಯಕತೆಯಿದೆ. ಅಂತಹ ವ್ಯಕ್ತಿ ಸಿಗಲಿಲ್ಲವೇ?

 ಮೂವರು ಜನಕರು, ಅವರು ನೇಮಿಸುವ ಹನ್ನೆರಡು ಮಂದಿಯ ಟ್ರಸ್ಟಿಗಳಿಗೆ ಸಂಬಂಧಪಟ್ಟ ವಿಚಾರ ಅವರುಗಳೇ ನಿರ್ಧರಿಸಲಿ. ಇತರರು ಏನೂ ಹೇಳಲಿಕ್ಕೆ ಇಲ್ಲ ಟ್ರಸ್ಟ್ ಕಾನೂನು ಮತ್ತು ಡೀಡ್ ನಂತೆ ಹೇಳಲು ಟ್ರಸ್ಟಿನ ಬಗ್ಗೆ ಯಾರಿಗೂ ಅವಕಾಶವಿಲ್ಲ ಜಾತಿಯ ಹಿತದೃಷ್ಟಿಯಿಂದ ಹೇಳುವುದು ಸರಿಯೂ ಅಲ್ಲ ಅದರ ಅಗತ್ಯವೂ ಇಲ್ಲ. ದೇವಾಡಿಗ ಜಾತಿಯ ಟ್ರಸ್ಟಿಗೆ ಕೊಡುಗೆಯಾಗಿ ಹಣ ಹೂಡಬಲ್ಲ ವ್ಯಕ್ತಿಗಳು ಅಭಿನಂದನಾರ್ಹರು. ಅವರು ನಿರ್ಧರಿಸಿರುವ ದೇವಾಡಿಗ ಗ್ಲೋಬಲ್ ಫೌಂಡೇಶನ್‍ನನ್ನು (ಟ್ರಸ್ಟ್) ಅವರು ಜಾತಿಯ ಹಿತಸಾಧನೆಗಾಗಿ ಕೂಡಲೇ ಮಾಡಲಿ ಎಂದು ಬಯಸೋಣ.

ವಿಶ್ವ ದೇವಾಡಿಗ ಒಕ್ಕೂಟ

ಎಲ್ಲಾ ದೇವಾಡಿಗ ಜಾತಿ ಭಾಂದವರಿಗಾಗಿ ಸಂಘಗಳು ಅಗತ್ಯ. ಈ ದಿಸೆಯಲ್ಲಿ ಅವಿಭಜಿತ ದ.ಕ ಜಿಲ್ಲೆಯ ಎಲ್ಲಾ ಜಾತಿಗಳವರು ಬಹಳ ಹಿಂದೆಯೇ ಸಂಘಗಳನ್ನು ಸ್ಥಾಪಿಸಿರುತ್ತಾರೆ. ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಂತೆಯೇ ನಮ್ಮ ಹಿರಿಯರು 1925 ರಿಂದ ಸಂಘಗಳನ್ನು ಸ್ಥಾಪಿಸಿಕೊಂಡು, ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರಕೃತ ನಮ್ಮ ಜಾತಿಯ 40ರಿಂದ 50 ಸಂಘಗಳು ಸ್ಥಾಪಿಸಲ್ಪಟ್ಟು ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬರುತ್ತಿದೆ. 1925 ರಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಸಂಘಗಳನ್ನು ಕ್ರಿಯಾಶೀಲವನ್ನಾಗಿ ಮಾಡುವುದರೊಂದಿಗೆ ಆ ಎಲ್ಲಾ ಸಂಘಳನ್ನು ರಕ್ಷಿಸಿವುದು, ನಮ್ಮ ಜಾತಿಯ ಜನಸಂಖ್ಯೆ(25 ಕ್ಕಿಂತ ಹೆಚ್ಚು ಮನೆಗಳಿರುವ) ಇರುವ ಪ್ರಧೇಶಗಳಲ್ಲಿ ಸಂಘಗಳನ್ನು ಸ್ಥಾಪಿಸುವುದು ಜಾತಿಯ ಸಬಲೀಕರಣದ ದಿಸೆಯಲ್ಲಿ ಅತ್ಯೀ ಅಗತ್ಯ. ಎಲ್ಲಾ ಸಂಘಗಳೂ, ಎಲ್ಲೆಡೆಯಲ್ಲಿರುವ ಜಾತಿ ಭಾಂಧವರು ಸೇರಿ,  ವಿಶ್ವ ದೇವಾಡಿಗ ಒಕ್ಕೂಟವನ್ನು ಸ್ಥಾಪಿಸಿವುದು, ಜಾತಿಯ ತುರ್ತು ಅವಶ್ಯಕತೆಯಾಗಿದೆ.ಸಂಘಗಳೂ ತಮ್ಮ ಆಸ್ತಿತ್ವನ್ನು ಉಳಿಸಿಕೊಳ್ಳುವರೇ, ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿತ ನೆಲೆಯಲ್ಲಿ ಜಾತಿಯ ಹಿತ ಸಾಧಿಸುವರೇ ಮತ್ತು ತಳಮಟ್ಟದ ದೇವಾಡಿಗ ಭಾಂಧವರಿಗೆ ನೆರವಾಗುವರೇ ವಿಶ್ವ ದೇವಾಡಿಗ ಒಕ್ಕೂಟ ಆಗಲೇಬೇಕು. ಒಕ್ಕೂಟವು ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಯೊಂದು ಸಂಘಗಳಿಗೂ. ಪ್ರತಿಯೊಬ್ಬ ದೇವಾಡಿಗ ಭಾಂದವರಿಗೂ ಅವಕಾಶ ಅಧಿಕಾರ ನೀಡುವುದಾಗಿದೆ.

ಇದು ಕರ್ನಾಟಕ ಸೊಸಾೈಟಿಸ್ ರಿಜಿಸ್ಟ್ರೇಶನ್ ಕಾಯಿದೆಯಂತೆ ರಿಜಿಸ್ಟ್ರಿ(ನೋಂದಾವಣೆ) ಆಗುವುದಾಗಿದ್ದೂ ಆ ಕಾಯಿದೆ ಎಲ್ಲರಿಗೂ ಅವಕಾಶ ಅಧಿಕಾರ ನೀಡುವುದನ್ನು ಪ್ರತಿಪಾದಿಸುತ್ತಿದೆ.

ನ್ಯಾಯವಾದಿ ರವೀಂದ್ರ ಮೊೈಲಿ ಕಾರ್ಕಳ ಇವರು ರಚಿಸಿರುವ ವಿಶ್ವ ದೇವಾಡಿಗ ಒಕ್ಕೂಟದ ಮೆಮೊರೆಂಡಮ್ ಆಫ್ ಅಸೋಸಿಯೆಶನ್ ಮತ್ತು ರೂಲ್ಸ್ ಎಂಡ್ ರೆಗ್ಯೂಲೇಶನ್ ಇದನ್ನು ಪರಿಷ್ಕರಿಸಿ ಕಾನೂನಿನ ತೊಡಕುಗಳನ್ನು ಹೋಗಲಾಡಿಸಬಹುದು. ಅಗತ್ಯ ಮತ್ತು ಸೂಕ್ತ ಕಲಂಗಳನ್ನು ಸೇರಿಸಿ ಸಂಘಗಳು ಸದಸ್ಯತನ, ಅಧಿಕಾರ ಜವಾಬ್ದಾರಿ ಹೊಂದುವರೇ ಸಂಘಗಳ ಮೆಮೊರೆಂಡಮ್ ಆಫ್ ಅಸೋಸಿಯೆಶನ್ (ಜ್ಞಾಪಕ ಪತ್ರ) ರೂಲ್ಸ್ ಎಂಡ್ ರೆಗ್ಯೂಲೇಶನ್ (ಕ್ರಮ ಮತ್ತು ನಿಬಂಧನೆ) ಗಳಿಗೆ ಕೆಲ ಕಲಂಗಳನ್ನು ಸೇರಿಸಿ ವಿಶ್ವ ದೇವಾಡಿಗ ಒಕ್ಕೂಟವನ್ನು ಸ್ಥಾಪಿಸಬಹುದು.

ವಿಶ್ವ ದೇವಾಡಿಗ ಒಕ್ಕೂಟ ರಚನೆಗಾಗಿ ಈಗಿರುವ ಎಲ್ಲಾ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಅಥವಾ ಪ್ರಮುಖ ಕಾರ್ಯಕರ್ತರು ಸೇರಿದಂತೆ ತಲಾ ಮೂವರು ಪ್ರತಿನಿಧಿಗಳು ಮತ್ತು ತಾರೀಕು 20-12-2016 ರಂದು ರಚಿಸಿರುವ ಕೋರ್ ಕಮಿಟಿಯ ಹದಿನೈದು ಮಂದಿ ಸದಸ್ಯರು ಸಭೆ ಸೇರಿ ವಿಶ್ವ ದೇವಾಡಿಗ ಒಕ್ಕೂಟದ ಬಗ್ಗೆ ತಯಾರಿಸಲ್ಪಡುವ ಕರಡು ಜ್ಞಾಪಕ ಪತ್ರ, ಕ್ರಮ ಮತ್ತು ನಿಬಂಧನೆಗಳನ್ನು ಕಲಂವಾರು ಆಗಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಒಕ್ಕುಟವನ್ನು ಸ್ಥಾಪಿಸಿ ಕಾರ್ಯಗತಗೊಳಿಸಬೇಕು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷರಾದ ತಾವು ಕೂಡಲೇ ಕಾರ್ಯಪ್ರವೃತ್ತರಾಗಬೇಕು.ದೇವಾಡಿಗ ಗ್ಲೋಬಲ್ ಫೌಂಡೇಶನ್ (ಟ್ರಸ್ಟ್) ಮತ್ತು ವಿಶ್ವ ದೇವಾಡಿಗ ಒಕ್ಕೂಟ ಎರಡೂ ಅತೀ ಶೀಘ್ರದಲ್ಲಿ ಸ್ಥಾಪಿಸಲ್ಪಟ್ಟು ಪರಸ್ಪರ ಪೂರಕವಾಗಿ ದೇವಾಡಿಗ ಜಾತಿಯ ಹಿತಸಾಧಿಸಿ, ಜಾತಿಯ ಘನತೆ, ಗೌರವ, ಪ್ರತಿಷ್ಟತೆಯನ್ನು ಹೆಚ್ಚಿಸುವಂತಾಗಲಿ.

ನನ್ನನ್ನು, 20-12-2016 ರ ಮಹತ್ವದ ಸಭೆಗೆ ಸ್ವತಹ ಅಹ್ವಾನಿಸಿ, ನನಗೆ ಸಭೆಯಲ್ಲಿ ಭಾಗವಹಿಸುವರೇ ಅವಕಾಶ ಮಾಡಿಕೊಟ್ಟಿರುವ ತಮಗೂ, ತಮ್ಮ ಪ್ರಧಾನ ಕಾರ್ಯದರ್ಶಿಯವರಿಗೂ, ವಿಶ್ವಾಸದಿಂದ ಕಂಡ ಭಾಂದವರಿಗೂ ನಾನು ಅಭಾರಿ. ಎಲ್ಲರಿಗೂ ಕೃತಜ್ಞತೆಗಳು.

ಈ ಪತ್ರವನ್ನು ದೇವಾಡಿಗ ಗ್ಲೋಬಲ್ ಫೌಂಡೇಶನ್ (ಟ್ರಸ್ಟ್) ವಿಶ್ವ ದೇವಾಡಿಗ ಒಕ್ಕೂಟದ ಬಗೆಗಿನ ನನ್ನ ಅಭಿಪ್ರಾಯ , ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷರೂ ಮತ್ತು ಪ್ರಧಾನ ಕಾರ್ಯದರ್ಶಿಯವರು ನನ್ನನ್ನು ಸ್ವತಹ ಸಭೆಗೆ ಅಹ್ವಾನಿಸಿದಂತೆ, ನಾನು 24 ವರ್ಷಗಳ ನಂತರ ಸಂಘದ ಸಭೆಯಲ್ಲಿ ಭಾಗವಹಿಸಿ ಕೃತಜ್ಞತೆಗಳನ್ನು ಸಲ್ಲಿಸಿರುವುದನ್ನು ದೇವಾಡಿಗ ಭಾಂಧವರ ಎಲ್ಲ ಸಂಘಗಳ ಕಾರ್ಯಕರ್ತರ ಗಮನಕ್ಕೆ ತರುವ ದಿಸೆಯಲ್ಲಿ ಎಲ್ಲರಿಗೂ ಕಳಿಸಿರುತ್ತೇನೆ.

ಕುರ್ಚಿ, ಸ್ಥಾನ, ಮಾನದ ಆಸೆ ನನಗಿಲ್ಲ. ಪಡೆಯುವ ಸ್ಥಿತಿಯಲ್ಲೂ ನಾನಿಲ.್ಲ ನನ್ನ ಪ್ರಾಯ, ಆರೋಗ್ಯ ಅವಕಾಶ ಕೊಡುವುದಿಲ್ಲ. ಅಪೇಕ್ಷಿಸಿ, ಸಭೆಗಳಿಗೆ ನನ್ನನ್ನು ಕರೆದರೆ ಭಾಗವಹಿಸುತ್ತೇನೆ. ಶಕ್ತ್ಯಾನುಸಾರ ಸಹಕಾರ ನೀಡ ಬಯಸುತ್ತೇನೆ. ದೇವಾಡಿಗರ ಹಿತಸಾಧನೆ ಹಿತರಕ್ಷಣೆ ಮಾಡಲು ಸಮಾನತೆ,ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಸಂಘಗಳು ಇರುವುದಾಗಿದೆ. ಎಲ್ಲಾ ಸಂಘಗಳ ಉದ್ದೇಶಗಳು ಒಂದೇ. ದೇವಾಡಿಗರೆಲ್ಲರೂ ಒಂದೇ ಜಾತಿಯವರು, ಒಂದಾಗಿ ಜಾತಿಯ ಸಂಪನ್ನತೆ, ಸಬಲೀಕರಣ, ಘನತೆ, ಗೌರವ, ಪ್ರತಿಷ್ಟೆಗಾಗಿ ದುಡಿಯುವುದು ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯ ಎಂಬ ನೆಲೆಯಲ್ಲಿ ಐಕ್ಯತೆ¬ಂದ ಸಾಮಾಜಿಕ ಕಳಕಳಿಯೊಂದಿಗೆ ದುಡಿಯೋಣ, ನಮ್ಮವರಿಗೆ ಮುಖ್ಯವಾಗಿ ನಮ್ಮ ಯುವಜನರಿಗೆ ಭವ್ಯ ಭವಿಷ್ಯವನ್ನು ರೂಪಿಸೋಣ.

ದೇವಾಡಿಗ ಗ್ಲೋಬಲ್ ಫೌಂಡೇಶನ್ (ಟ್ರಸ್ಟ್) ಈ ಉದ್ದೇಶಗಳ ಸಾಧನೆಗಾಗಿ ಆರ್ಥಿಕ ಅನುಕೂಲತೆ ಒದಗಿಸಿಕೊಡುವುದರೊಂದಿಗೆ ಘನ ಉದ್ಧೇಶಗಳನ್ನು ಸಾಧಿಸಲಿ ವಿಶ್ವ ದೇವಾಡಿಗ ಒಕ್ಕೂಟವು ಎಲ್ಲಾ ದೇವಾಡಿಗರಿಗೆ, ಎಲ್ಲಾ ಸಂಘಗಳಿಗೆ ಅವಕಾಶ ನೀಡಿ ಐಕ್ಯತೆಯಿಂದ ಪ್ರಜಾಪ್ರಭುತ್ವ ರೀತಿಯಲ್ಲಿ ಹಿರಿಯರು ಸ್ಥಾಪಿಸಿರುವ ಸಂಘಗಳ ಮುನ್ನಡೆ, ದೇವಾಡಿಗರ ಹಿತಸಾಧನೆಯನ್ನು ಸಂಘಗಳ ಸಹಕಾರದೊಂದಿಗೆ ಮಾಡಲಿ. ಇದು ಸಮಾಜದ ಹಿರಿಯ ಕಾರ್ಯಕರ್ತನಾದ ನನ್ನ ಬಯಕೆ. ನನ್ನ ಜೀವಮಾನ ಕಾಲದಲ್ಲಿ ಈ ಬಯಕೆಯು ಈಡೇರಿದರೆ ನಾನು ಜಾತಿಗಾಗಿ ಕಿಂಚಿತ್ ದುಡಿದಿರುವುದು ಸಾರ್ಥಕ, ಎಂದು ನನ್ನ ಭಾವನೆ

ಗೌರವಪೂರ್ಣ ವಂದನೆಗಳೊಂದಿಗೆ

ಇತೀ ತಮ್ಮ ವಿಶ್ವಾಸಿ

ಸ್ಥಳ: ಮಂಗಳೂರು

ದಿನಾಂಕ : 26-12-2016


Share