ಕದಮ್ ದುಬೈ(ರಿ)- 8ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಹಾಗೂ ಅಭಿನಂದನಾ ಸಮಾರಂಭ (Updated)

ತ್ರಾಸಿ: ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ(ರಿ)- 8ನೇ ವರ್ಷದ  ಇವರ ವತಿಯಿಂದ 8ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಹಾಗೂ ಅಭಿನಂದನಾ ಸಮಾರಂಭ ಶನಿವಾರ ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಭಾಭವನದಲ್ಲಿ ನಡೆಯಿತು.

ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ದುಬೈ ಕದಮ್ ಉಪಾಧ್ಯಕ್ಷರಾದ ಸುರೇಶ್ ದೇವಾಡಿಗ ಕಂಚಿಕಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದೇವಾಡಿಗ ಸಮುದಾಯದ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ / ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಸನ್ಮಾನಿಸಲಾಯಿತು ಹಾಗೆಯೇ ದೇವಾಡಿಗ ಸಮುದಾಯದ ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ ಮೊಯ್ಲಿ ಇವರನ್ನು ಅಭಿನಂದಿಸಲಾಯಿತು.

ಪ್ರಜ್ವಲ್ (ಎಸ್.ಎಸ್.ಎಲ್.ಸಿ)  -607 ಮಾರ್ಕ್ಸ್ - 97.44% ( ರಮ್ಯ ಮತ್ತು ಶಿಲ್ಪ -95.86 - ಚಿತ್ರ ಇಲ್ಲ)

ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಹಾಗೂ ಕದಮ್ ದುಬೈ ಗೌರವಾಧ್ಯಕ್ಷ ರಾಜು ದೇವಾಡಿಗ ತ್ರಾಸಿ, ಹಟ್ಟಿಯಂಗಡಿ ಸಿದ್ಧಿವಿನಾಯಕ ರೆಸಿಡೆನ್ಸಿಯಲ್ ಶಾಲೆಯ ಉಪಪ್ರಾಂಶುಪಾಲ ರಾಮ ದೇವಾಡಿಗ, ನಾಗರಾಜ ರಾಯಪ್ಪನಮಠ, ನವದೆಹಲಿ ಕಾರ್ಪೋರೇಶನ್ ಬ್ಯಾಂಕಿನ ಮುಖ್ಯ ಪ್ರಬಂಧಕ ಮಹಾಲಿಂಗ ದೇವಾಡಿಗ, ಕದಮ್ ದುಬೈ ಗೌರವಾಧ್ಯಕ್ಷ ಶೀನ ದೇವಾಡಿಗ, ದೇವಾಡಿಗ.ಕಾಮ್ ನ ಸಂಚಾಲಕ ಹಾಗೂ ಕದಮ್ ದುಬೈ ಸಲಹೆಗಾರ ಬಿ.ಜಿ.ಮೋಹನದಾಸ್,        ಮುಂಬೈ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ರಿ ಅಧ್ಯಕ್ಷ ಸುಬ್ಬ ದೇವಾಡಿಗ, ಸುಧಾಕರ್ ದೇವಾಡಿಗ, ದುಬೈ ಕದಮ್ ಸಂಚಾಲಕ ಶ್ರೀಕಾಂತ್ ಬೈಂದೂರು, ದುಬೈ ಕದಮ್ ಜೊತೆಕಾರ್ಯದರ್ಶಿ ಮಂಜುನಾಥ ದೇವಾಡಿಗ, ಬೆಂಗಳೂರು ಸಾಫ್ಟ್ ವೇರ್ ಎಂಜಿನೀಯರ್ ಎಚ್.ಪಿ ಕಂಪನಿ ಯ ಗಣೇಶ್ ದೇವಾಡಿಗ ಕಿರಿಮಂಜೇಶ್ವರ, ಹಿಂದ್ ಪ್ಯಾಕ್ ಇಂಡಸ್ಟ್ರೀಸ್ ರಮೇಶ್ ದೇವಾಡಿಗ ವಂಡ್ಸೆ, ಬೈಂದೂರು ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ್ ದೇವಾಡಗ, ಆಲೂರು ರಘುರಾಮ ದೇವಾಡಿಗ, ಖಂಬದಕೋಣೆ ಜಿ.ಪಂ.ಸದಸ್ಯೆ ಗೌರಿ ದೇವಾಡಿಗ, ಕೊಲ್ಲೂರು ಡಾಟ್ ಕಾಮ್ ಸಂಚಾಲಕಿ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.

ದುಬೈ ಕದಮ್ ಉಪಾಧ್ಯಕ್ಷ ಮುತ್ತ ದೇವಾಡಿಗ ಹೆಮ್ಮಾಡಿ ಸ್ವಾಗತಿಸಿದರು, ಕದಮ್ ದುಬೈ ಇದರ ಪ್ರಧಾನ ಕಾರ್ಯದರ್ಶಿ ನಾರಾಯಣ ದೇವಾಡಿಗ ಬಡಾಕೆರೆ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕಿ ಗೌರಿ ದೇವಾಡಿಗ, ಮತ್ತು ಸಪ್ತಸ್ವರ ಸೊಸೈಟಿ ತಲ್ಲೂರು ರವಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು, ಪುರುಷೋತ್ತಮ ದಾಸ್ ಉಪ್ಪುಂದ ವಂದಿಸಿದರು.

 


Share