ಉಪ್ಪುಂದ: 'ಪ್ರೇರಣಾ' - ದೇವಾಡಿಗ ಮಹಿಳಾ ಸಮ್ಮಿಲನಾ ಕಾರ್ಯಕ್ರಮ 2018

ಬ್ಯೆಂದೂರು: ದೇವಾಡಿಗ ಸಂಘ (ರಿ.) ಉಪ್ಪುಂದ ಇವರ ವತಿಯಿಂದ ಪ್ರೇರಣಾ ಮಹಿಳಾ ಜಾಗ್ರತಿ ಕಾರ್ಯಕ್ರಮ 2018 ವು ದಿನಾಂಕ 25/12/2018 ರ ಮಂಗಳವಾರ ಮಾತ್ರಶ್ರೀ ಸಭಾಭವನ ಉಪ್ಪುಂದದಲ್ಲಿ ನೆಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ದೇವಾಡಿಗ ವಹಿಸಿದ್ದರು. ಕಾರ್ಯಕ್ರಮ ವನ್ನು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು.  ಉಡುಪಿ ಜಿಲ್ಲಾ ಆರೋಗ್ಯ ಸಂಯೋಜಕರಾದ ಸಚ್ಚಿದಾನಂದ ಅವರು ಸರಕಾರದ ವಿವಿಧ  ಆರೋಗ್ಯ ಯೋಜನೆಗಳ  ಬಗ್ಗೆ  ಸವಿವರವಾದ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಮುಕಾಂಬು ಶ್ರೀನಿವಾಸ ದೇವಾಡಿಗ ಬೈಂದೂರು, ಶ್ರೀಮತಿ ಪ್ರಮೀಳಾ ಕೆ  ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು,  ಶ್ರೀಮತಿ ಮೋಹಿನಿ ಗೋಪಾಲ್ ದೇವಾಡಿಗ ಉಪನ್ಯಾಸಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ, ಶ್ರೀಮತಿ. ಯಶೋಧಾ ಬಿ ದೇವಾಡಿಗ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನ್, ಶ್ರೀಮತಿ ಶಿಲ್ಪಾ ನರಸಿಂಹ ದೇವಾಡಿಗ ಅಧ್ಯಕ್ಷರು ಬಾಲಾಜಿ ನವೋದಯ ಸಂಘ ಖಂಬದಕೋಣೆ; ಶ್ರೀಮತಿ
ಮಲ್ಲಿಕಾ ದೇವಾಡಿಗ ಕಾರ್ಯದರ್ಶಿ ದೇವಾಡಿಗ ಮಹಿಳಾ ಘಟಕ ಉಪ್ಪುಂದ, ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಮಹಿಳೆಯರಿಗೆ ಅರಸಿಣ ಕುಂಕುಮ ನೀಡುವ  ಸಾಂಪ್ರದಾಯಿಕ ಕಾರ್ಯಕ್ರಮ ನಡೆಸಲಾಯಿತು.

ನಂತರ ವಿವಿದ ಸ್ಪರ್ಧೆಗಳನ್ನು ನಡೆಸಲಾಯಿತು.ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕುಮಾರಿ ಪ್ರಫುಲ್ಲಾ ದೇವಾಡಿಗ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಭೆಗೆ ಬಂದಿರುವ ಅತಿಥಿಗಳನ್ನು ಕುಮಾರಿ ಸುಮಂಗಲಾ ದೇವಾಡಿಗ ಸ್ವಾಗತಿಸಿದರು. ಶ್ರೀಮತಿ ಮಲ್ಲಿಕಾ ದೇವಾಡಿಗ ಧನ್ಯವಾದಗೈದರು.


Share