ಸಕಾಲಿಕ  ಸಾಹಿತ್ಯ ಪ್ರಶಸ್ತಿಗೆ ನಿವೃತ್ತ ಉಪನ್ಯಾಸಕಿ ಡಾ. ಮಾಧವಿ ಭಂಡಾರಿ ಆಯ್ಕೆ 

ಉಡುಪಿ : ಬಹುಮುಖ ಪ್ರತಿಭೆ ಕವಿತಾ ವಿಷ್ಣು  ನಾಯಕ್ ನೆನಪಿನಲ್ಲಿ ಎರಡು ವರ್ಷದಿಂದ  ನೀಡುತ್ತಿರುವ ಸಕಾಲಿಕ ಸಾಹಿತ್ಯ  ಪ್ರಶಸ್ತಿಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜು ನಿವೃತ್ತಿ ಉಪನ್ಯಾಸಕಿ ಹಾಗೂ ಪ್ರಾಂಶುಪಾಲರದ  ಡಾ. ಮಾಧವಿ  ಭಂಡಾರಿ ಆಯ್ಕೆಯಾಗಿದ್ದಾರೆ.  

ಸಾಹಿತ್ಯ ಶಿಕ್ಷಣ ರಂಗಭೂಮಿ ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಆಯ್ಕೆ ಮಾಡಲಾಗಿದ್ದು ಫೆ.10ರಂದು ಅಂಬಾರಕುಡ್ಲು ಪರಿಮಳ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ 10 ಸಾವಿರ ರೂ ನಗದು ಹಾಗೂ ಪುರಸ್ಕಾರ  ಒಳಗೊಂಡಿದೆ.


Share