ಕನ್ನಡಿಗರು ಇಸ್ರೇಲ್ ಫ್ರಂಡ್ಸ್ ಮತ್ತು ಸಿ.ಮೈನಾರ್ ಗ್ರೂಪ್ ಇವರಿಂದ ಅಶಕ್ತರಿಗೆ 1.8 ಲಕ್ಷ ರೂ ನೆರವು (Pics)

ದೂರದ ಇಸ್ರೇಲ್ ದೇಶದಲ್ಲಿ ಕೆಲಸ ಮಾಡುತ್ತಿರುವ ಕರಾವಳಿ ಮೂಲದ ಕನ್ನಡಿಗರು ಇಸ್ರೇಲ್ ಪ್ರೆಂಡ್ಸ ಮತ್ತು ಸಿ.ಮೈನಾರ್ ಗ್ರೂಪ್ ರಚಿಸಿಕೊಂಡು ಬಡವರ ಬಾಳಿಗೆ ಬೆಳಕಾಗುತ್ತಿದ್ದಾರೆ. ಎರಡು ವರ್ಷಗಳಿಂದ ಈ ಸಂಘ ರಚಿಸಿಕೊಂಡು ತಮ್ಮ ಆದಾಯದ ಉಳಿತಾಯ ಹಣ ಮತ್ತು ಭಾರತೀಯ ಮೂಲದವರಿಂದ ನೆರವು ಯಾಚಿಸಿಕೊಂಡು ಸಂಗೃಹವಾದ ಹಣದಿಂದ, ಅವರ ಕಷ್ಟಗಳನ್ನು ಅರಿತು ವೈದ್ಯಕೀಯ ನೆರವಿಗಾಗಿ ಮತ್ತು ಅತಿವ ಬಡತನದಲ್ಲಿ ಇರುವ ಕುಟುಂಬಗಳಿಗೆ ನೆರವನ್ನು ಒದಗಿಸುತ್ತಾ ಬಂದಿದ್ದು.ಇದು ಅವರ ಎರಡನೆ ವರ್ಷದ ಸೇವಾ ಕಾರ್ಯ ಆಗಿರುತ್ತದೆ. 

ಈ ಸಾರಿ ಒಂಭತ್ತು ಬಡವರ ಮನೆಬಾಗಿಲಿಗೆ ತೆರಳಿ ಅತಿವ ಅಸಹಾಯಕ ಸ್ಥಿತಿಯಲ್ಲಿ ಇದ್ದ ಕುಟುಂಬಗಳಿಗೆ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಹಣವನ್ನು ಚೆಕ್ಕ್ ರೂಪದಲ್ಲಿ ವಿತರಿಸಲಾಯಿತು.

ಹಾಗೆಯೆ ಮೊನ್ನೆ ದಿವಸ ಬೆಳಗಾವಿಗೆ ತೆರಳಿ ನಿವೃತ್ತ ಯೋಧರಿಗೆ ನಲವತ್ತು ಸಾವಿರ ರೂಪಾಯಿ ಹಣವನ್ನು ಚೆಕ್ಕ್ ರೂಪದಲ್ಲಿ ನಿಡಲಾಯಿತು.

(ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ಆದ ಶ್ರೀ ಜಗದೀಶ ದೇವಾಡಿಗ ಮುಳ್ಳಿಕಟ್ಟೇಯವರ ಮನವಿಯ  ಮೇರೆಗೆ ಇಸ್ರೇಲಿನ ಸಿ ಎಮ್ ಆರ್ ಮಿತ್ರ ಬಳಗದವರು ಇಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಗಾಗಿ ಹೇಮ್ಮಾಡಿ ಅಟಬೇಲ್ಟುರು  ಆಕಾಶ ದೇವಾಡಿಗರಿಗೇ ರೂ 15,000/ ಮತ್ತು ಕುಂದಾಪುರ ದ ಸಿಂಚನ ದೇವಾಡಿಗರಿಗೆ ರೂ 15,000/ (ಹ್ರದಯ ಸಂಬಂದಿ ಶಸ್ತ್ರ ಚಿಕಿತ್ಸೆ ) ಅವರ ಮನೇಗೇ ತೇರಳಿ ವೈದ್ಯಕೀಯ ನೇರವು ನೀಡಿದರು. ಈ ಸಂಧರ್ಭದಲ್ಲಿ ಶ್ರೀ ಜಗದೀಶ್ ಮುಳ್ಳಿಕಟ್ಟೇ  ಮತ್ತು ಶ್ರೀ  ಶಶಿ ಪೂಜಾರಿ ಉಪಸ್ಥಿತರಿದ್ದರು)

ಎರಡು ವರ್ಷಗಳಲ್ಲಿ ಹದಿನೆಂಟು ಕುಟುಂಬಗಳಿಗೆ ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಹಣವನ್ನು ಇಲ್ಲಿಯ ವರೆಗೆ ನಿಡಲಾಗಿದೆ.  ಇಸ್ರೆಲ್ ನಲ್ಲಿ ಉದ್ಯೊಗದಲ್ಲಿರುವ ಶಶಿ ಪೂಜಾರಿ ಮೂವತ್ತು ಮುಡಿ ಇವರ ಜೊತೆ ಸೇರಿಕೊಂಡು ಇಂದಿನ ಸೇವಾ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.

ಸೇವಾ ಕಾರ್ಯದಲ್ಲಿ ಜಗದೀಶ.ದೇವಾಡಿಗ  ಮುಳ್ಳಿಕಟ್ಟೆ ಭಾಗವಹಿಸಿದ್ದರು. ಇಸ್ರೇಲ್ ಸ್ನೇಹಿತರ ಬಳಗಕ್ಕೆ ದೇವರು ಇನ್ನಷ್ಟು ಸೇವಾ ಕೆಲಸ ಮಾಡುವ ಶಕ್ತಿ ನಿಡಲಿ.

ಸಹಾಯ ಪಡೆದವರು:

* ಗಣೇಶ ಬೊವಿ- 15,000

* ಸಿಂಚನ ದೇವಾಡಿಗ ಕಾಳವರ; ಹೃದಯದಲ್ಲಿ ಹೋಲು-15,000

* ಜ್ಯೋತಿ ಈಶ್ವರ ಬಳಕ್ಕೂರು ; 15,000

* ರೊಷೀತ 11 ತಿಂಗಳು, ದೆಹ ದೌರ್ಬಲ್ಯ-15,000
* ರಹೀಮ್ ಹೆಮ್ಮಾಡಿ, ಬಡತನ- 15,000
* ಆಶಿಯ ಹೆಮ್ಮಾಡಿ , ಬಡತನ-  10,000
* ಆಕಾಶ ದೇವಾಡಿಗ ಹರೆಗೋಡು, ಕಣ್ಣೀನ ಸಮಸ್ಯೆ- 15,000

* ಗೋಪಾಲ ಮಡಿವಾಳ ಕೊಳುರು, ಬೆನ್ನು ಮೂಳೆ ಮುರಿತ- 20,000
* ನಾಗರತ್ನ ಪೂಜಾರಿ- 20,000
* ಸುಮಿತ್ ಭಂಡಾರಿ ಮರವಂತೆ ೮ವರ್ಷ,  ನರದೌರ್ಬಲ್ಯ- 15,000
* ಬೆಳಗಾವಿ ನಿವೃತ್ತ ಯೋಧರಿಗೆ- 40,000

ಒಟ್ಟು-  1,80,000 
 


Share