ಮೂಡಬಿದ್ರೆ ಪುರಸಭೆಯ ಮಾಜಿ ಅಧ್ಯಕ್ಷ ದಿ.ರತ್ನಾಕರ ದೇವಾಡಿಗರಿಗೆ ನುಡಿ ನಮನ

ಮೂಡಬಿದ್ರೆ:  ಪುರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಉದ್ಯಮಿ, ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ರತ್ನಾಕರ ದೇವಾಡಿಗ (53) ಅವರು ಜ.7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.  

ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಮೂಡಬಿದ್ರಿಯ ಪದ್ಮಾವತಿ ಮಹಾಸಭಾ ಭವನದಲ್ಲಿ ದಿನಾಂಕ ಜನವರಿ 26ರಂದು ನಡೆಯಿತು, ಕಾರ್ಯಕ್ರಮದಲ್ಲಿ,ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಖ್ಯಸ್ಥ ಮೋಹನ್ ಆಳ್ವ, ಮುಲ್ಕಿ ಮೂಡಬಿದ್ರಿಯ ಮಾಜಿ ಸಚಿವ, ಶ್ರೀ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ್ ಶೆಟ್ಟಿ , ಶಾಸಕರಾದ ಉಮಾನಾಥ ಕೋಟಿಯನ್, ರಾಜೇಶ್ ನಾಯಕ್ ಉಳ್ಳಿಪಡಿಗುತ್ತು, ಜಗದೀಶ್ ಅಧಿಕಾರಿ, ಮೂಡಬಿದ್ರಿ ಭಾಗದ ಊರ ಹಿರಿಯರು, ಕಿರಿಯರು,ಆ ಭಾಗದ ಎಲ್ಲಾ ಪಕ್ಷದ ಮುಖಂಡರು, ದೇವಸ್ತಾನಗಳ ಮುಖ್ಯಸ್ಥರುಗಳು , ಕಟುಂಬ ವರ್ಗದವರು, ಹಿತೈಷಿಗಳು ಅಂತಿಮ ನಮನ ಸಲ್ಲಿಸಿದರು, ಸಾವಿರಾರು ಜನ ಪಾಲುಗೊಂಡರು.


Share