ದೇವಾಡಿಗ ಸಂಘ ಮುಂಬೈ - ಮಹಿಳಾ ವಿಭಾಗದ ವತಿಯಿಂದ ವಿಶೇಷತೆಯೊಂದಿಗೆ
ಆಟಿದ ಒಂಜಿ ದಿನ ಆಚರಣೆ
ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದ ವತಿಯಿಂದ ಆಟಿದ ಒಂಜಿ ದಿನ ಆಚರಣೆಯು ದಿನಾಂಕ 23.07.2016 ರಂದು ದೇವಾಡಿಗ ಸೆಂಟರ್ ದಾದರ್ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವು ಮಹಿಳಾ ವಿಭಾಗ್ದಾ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮ ಕು. ಕನ್ಯಶ್ರೀ ಆರ್ ಮೊಯಿಲಿ ಇವರ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ ಉಪಸ್ತಿತರಿದ್ದು ಕಾರ್ಯಕ್ರಮದ ಬಗ್ಗೆ ಹಾಗೂ ಮಹಿಳಾ ವಿಭಾಗದ ಕಾರ್ಯಕ್ರಮಗಳನ್ನು ಹೊಗಳುತ್ತಾ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಶ್ರೀ ಹಿರಿಯಡ್ಕ ಮೋಹನ್ದಾಸ್ ಮಾತಾಡುತ್ತಾ ಮಹಿಳೆಯರನ್ನು ಒಟ್ಟುಕೂಡಿಸಲು ಇಂತಹ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮ ಜರಗಿಸುವುದು ಅತೀ ಮುಖ್ಯ, ನಿರಂತರವಾಗಿ ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು ಎಂದರು.
ಶ್ರೀಮತಿ ಭಾರತಿ ನಿಟ್ಟೇಕರ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧು ಬಾಂಧವರನ್ನು ಸ್ವಾಗತಿಸಿದರು.
ಆಟಿದ ಒಂಜಿ ದಿನ ಕಾರ್ಯಕ್ರಮವನ್ನು ಆಚರಿಸುವ ಮುಖ್ಯ ಕಾರಣ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಜಯಶ್ರೀ ಅತ್ತಾವರ್, ಅಮಿತಾ ರಾವ್, ನಿರ್ಮಲ ದೇವಾಡಿಗ,ರಂಜನಿ ಮೊಯಿಲಿ, ಸುರೇಖಾ ದೇವಾಡಿಗ, ಕುಸುಮ ದೇವಾಡಿಗ, ಸರೋಜಿನಿ ದೇವಾಡಿಗ, ಇಂದುಮತಿ ದೇವಾಡಿಗ, ಮಾಲತಿ ಮೊಯಿಲಿ,ಶಶಿಕಲಾ ಮೊಯಿಲಿ ಮತ್ತು ಪ್ರತಿಮಾ ಮೊಯಿಲಿಯವರು ಚಿತ್ರಗೀತೆ ಹಾಗೂ ತುಳು ಜಾನಪದ ಗೀತೆಯನ್ನು ಹಾಡಿದರು.
ಸಂಘದ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗ ಇವರ ಧರ್ಮಪತ್ನಿ ಶ್ರೀಮತಿ ಪ್ರಫುಲ್ಲ ದೇವಾಡಿಗ ಇವರಿಗೆ ಹೂಗುಚ್ಚೆ ಕೊಟ್ಟು ಗೌರವಿಸಲಾಯಿತು. C A ಪರೀಕ್ಷೆಯಲ್ಲಿ ಉತ್ತೀರ್ಣರಾದಕು.
ನಿಳಿಶ ರಮೇಶ್ ಮೊಯಿಲಿ ಯವರನ್ನು ಹೂಗುಚ್ಚೆ ಕೊಟ್ಟು ನ್ಮಾನಿಸಿ ಅವರ ಮುಂದಿನ ಜೀವನಕ್ಕೆ ಶುಭಕೋರಲಾಯಿತು.
ನಂತರ ಹಲವಾರು ತರಹದ ಸಾಂಪ್ರದಾಯಿಕೆ ಕ್ರೀಡೆಯನ್ನು ಆಚರಿಸಲಾಯಿತು. ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡುಪ್ ನ ಸರೋಜಿನಿ ದೇವಾಡಿಗ, ಸಿಟಿ ವಲಯದ ಸರೋಜಿನಿ ದೇವಾಡಿಗ ಹಾಗೂ ಚೆಂಬೂರ್ ವಲಯದ ಹೇಮಲತಾ ಶೇರಿಗಾರ್ ಇವರ ಕಾರ್ಯಕಾರಮವು ವಿಶೇಷವಾಗಿ ಆಕರ್ಷಣೀಯವಾಗಿತ್ತು.
ಸಿಟಿ ವಲಯದ ಮಮತಾ ದೇವಾಡಿಗ ಆ ದಿನದ ಅದೃಷ್ಟ ಮಹೀಯಾಗಿ ವಿಜೇತರಾದರು.
ಶ್ರೀ ಆಕಾಶ ಮನೋಹರ್ ಬರೆದು, ನಿರ್ಮಾಪನೆ ಹಾಗೂ ನಿರ್ದೇಶನದ 'ಕೀಮತ್' ಎಂಬ ಕಿರುಚಿತ್ರ ವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ಜಯಂತಿ ಮಾಧವ ದೇವಾಡಿಗ ನಿರೂಪಿಸಿದರು.
ಉಪಕಾರ್ಯಾಧ್ಯಕ್ಷೆ ಸುರೇಖಾ ದೇವಾಡಿಗ ಜತೆ ಕಾರ್ಯದರ್ಶಿ ಲತಾ ಮೊಯಿಲಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 45 ತರಹದ ಆಟಿಯ ವಿಶೇಷತೆಯ ಖಾದ್ಯ ಪದಾರ್ಥಗಳನ್ನು ಮಹಿಳೆಯರು ತಯಾರಿಸಿ ತಂದಿದ್ದರು. ಶ್ರೀಮತಿ ಭಾರತಿ ನಿಟ್ಟೇಕರ್ ಪ್ರಾಯೋಜಕತ್ವದಲ್ಲಿ ನೆರೆದವರಿಗೆ ಉಡುಗೊರೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಮಹಿಳಾ ವಿಭಾಗದಸದಸ್ಯರೊಂದಿಗೆ ಸಂಘದ ಎಲ್ಲಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗದ ಸದಸ್ಯರು, ಹಾಗೂ ಯುವವಿಭಾಗದ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು