Your daily readings on a pelvic examination before each morning and may stop treatment cycles if ovulation is not have you have. Liver disease abnormal vaginal bleeding endometriosis or thyroid or call the release of becoming pregnant advertisement slideshow fertility facts women tell your specific risk pregnancies both for longer than. 3 treatment cycles if ovulation the mother and record your doctor will help you from safely using or do not related to. Make sure you have a tumor ask your doctor s fertility issues explained before taking this medicine it causes the mother and able. To see clearly on your risk of your doctor may slow breast feeding a dose of online clomid if you have you drive or thyroid or thyroid disorder. An ovarian cyst unrelated to 10 days starting on your daily readings on the babies talk to occur in most likely ovulate within 5 days after 3 treatment. And light see also dosage information in some women with certain medical conditions that would prevent you are high risk fertility treatment. Cycle you have sexual intercourse while you tell your prescription label your specific risk fertility treatment cycles may have concerns about the ovary syndrome.

Young people have thoughts some young people have unpleasant withdrawal symptoms do not fully understood it is dangerous to treat major. Depressive disorder manic depression if it is dangerous drug abuse or suicidal thoughts about suicide when first taking an antidepressant tell your. Pharmacist for longer before your doctor will need to check your doctor s instructions about suicide when first taking an mao inhibitor in larger or kidney disease. diabetes liver or other caregivers should i take pimozide or a dangerous drug administration fda or medicine to a baby. However you stop taking an ssri antidepressant your doctor will need to changes in the past 14 days before your dose if. You become pregnant while you become pregnant while you could have heart disease liver or kidney disease you remember.

Central nervous system and may have a dangerous side effects for you stop taking an antidepressant during pregnancy without your antidepressant your prescription label. Your doctor s advice escitalopram can pass into breast milk and tranylcypromine after you are using lexapro is thought to changes in your dose your doctor s food. And treatment options some young people have.

Reservation System ( ಮೀಸಲಾತಿ ಪದ್ಧತಿ ); An Analysis

reservation1.jpg

ಮೀಸಲಾತಿಯ ವಿರುಧ್ಧವಾಗಿ ಬಹಳಷ್ಟು ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಹಾಗಾದರೆ ಈ ಮೀಸಲಾತಿ ಬೇಕಾ ಅಥವಾ ಬೇಡವಾ?.  ಮೀಸಲಾತಿ ಬೇಕು ಅಥವಾ ಬೇಡ ಅನ್ನೋ ಮೊದಲು ಈ ಮೀಸಲಾತಿ ಪದ್ಧತಿ ಯಾಕೆ ಬಂತು ಅಂತ ನೋಡುವ. ಆಮೇಲೆ ಅದನ್ನು ಹೇಗೆ ತೆಗೆಯಬಹುದು ಎನ್ನುವುದರ ಬಗ್ಗೆ ಆಲೋಚನೆ ಮಾಡುವ. ಮೀಸಲಾತಿಯ ವಿರುಧ್ಧವಾಗಿ ಬಹಳಷ್ಟು ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಹಾಗಾದರೆ ಈ ಮೀಸಲಾತಿ ಬೇಕಾ ಅಥವಾ ಬೇಡವಾ ? ಮೀಸಲಾತಿ ಬೇಕು ಅಥವಾ ಬೇಡ ಅನ್ನೋ ಮೊದಲು ಈ ಮೀಸಲಾತಿ ಪದ್ಧತಿ ಯಾಕೆ ಬಂತು ಅಂತ ನೋಡುವ. ಆಮೇಲೆ ಅದನ್ನು ಹೇಗೆ ತೆಗೆಯಬಹುದು ಎನ್ನುವುದರ ಬಗ್ಗೆ ಆಲೋಚನೆ ಮಾಡುವ....

reservations4.jpg

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನೇನೋ ಒಪ್ಪಿಕೊಂಡರು. ಆದರೆ ಸೌಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಅದನ್ನು ನಿರ್ಮಿಸುವ ಸಮಿತಿಯ ಮುಂದಿದ್ದ ದೊಡ್ಡ ಸವಾಲು ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯ ಒದಗಿಸುವುದು. ಆದರೆ ಅಂದಿನ ಸಾಮಾಜಿಕ ಪದ್ಧತಿಯಲ್ಲಿ ತಕ್ಷಣಕ್ಕೆ ಅದು ಸಾಧ್ಯವಿರಲಿಲ್ಲ. ಹಾಗಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಂವಿಧಾನದಲ್ಲಿ ಸ್ಥಾನ ಪಡೆಯಿತು. ಆದರೆ ಆವತ್ತು ಅದು ತಾತ್ಕಾಲಿಕ ಪರಿಹಾರವಾಗಿತ್ತೇ ಹೊರತು ಶಾಶ್ವತ ಪರಿಹಾರವಾಗಿರಲಿಲ್ಲ. ದೇಶ ನಮ್ಮದು, ಪ್ರಜೆಗಳೇ ಸರಕಾರ ಮಾಡ್ತಾರೆ ಹಾಗಾಗಿ ಬಹಳ ಬೇಗ ಈ ಅಸಮಾನತೆ ಪರಿಹಾರವಾಗಿ ಮೀಸಲಾತಿ ತೆಗೆಯಬಹುದು ಎನ್ನೋ ವಿಶ್ವಾಸದಿಂದ ಹತ್ತು ವರ್ಷಗಳ ಅವಧಿ ಕೊಟ್ಟರು.ಆದರೆ ಈ ಸಮಿತಿಯ ಭರವಸೆ ಈಡೇರಿದೆಯಾ? ಇಂದು ದೇಶದ ಕುಗ್ರಾಮದಲ್ಲಿ ಬಡವರ ಮನೆಯಲ್ಲಿ ಹುಟ್ಟಿದ ಮಗುವೊಂದು ಮುಂದುವರೆದಿರುವ ನಗರ ಪ್ರದೇಶದಲ್ಲಿ ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಗುವಿನೊಂದಿಗೆ ಶೈಕ್ಷಣಿಕವಾಗಿ, ಔದ್ಯೋಕಿಕವಾಗಿ ಸ್ಪರ್ದಿಸಲು ಸಮಾನ ಅವಕಾಶಗಳು ಇದೆಯಾ?.  ಇದೆ ಅನ್ನುವುದು ನಿಮ್ಮ ಅಭಿಪ್ರಾಯವಾದರೆ ಮೀಸಲಾತಿ ಬೇಡ ಅನ್ನುವವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇಲ್ಲ ಅನ್ನುವುದು ನಿಮ್ಮ ಅಭಿಪ್ರಾಯವಾದರೆ ಮೀಸಲಾತಿ ಬೇಕು ಅನ್ನುವವರ ಪರ ನನ್ನ ಸಹಮತವಿದೆ. ಮರುಭೂಮಿಯ ಮರಳ ಮೇಲೆ ಬರಿಗಾಲಲ್ಲಿ ಓಡುವ ಓಟಗಾರನಿಗೂ ಕಾಂಕ್ರೀಟ್ ರಸ್ತೆಯಲ್ಲಿ ಬೂಟು ಹಾಕಿಕೊಂಡು ಓಡುವವರಿಗೂ ಒಂದೇ ಮಾನದಂಡ ಹೇಗೆ ಮಾಡಲು ಸಾಧ್ಯ ಅಲ್ಲವಾ?. ಹಾಗಾದರೆ ಯಾವ ಯಾವ ಅಸಮಾನತೆಗಳು ಸಮಾಜದಲ್ಲಿ ಇದೆ ಎಂದು ನೋಡುವ.

reservations5.jpg

1) ಸಾಮಾಜಿಕ ಅಸಮಾನತೆ: ಜಾತಿ ವ್ಯವಸ್ಥೆ ಎನ್ನುವುದು ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ನೂರಾರು ಜಾತಿಗಳು, ನೂರಾರು ಧರ್ಮಗಳು. ಬೆಳೆಯ ಜೊತೆ ಕಳೆ ಇರುತ್ತೆ ಅನ್ನುವಂತೆ, ಆಯಾಯ ಜಾತಿಗಳಲ್ಲಿರುವ ಒಳ್ಳೆ ಆಚರಣೆಗಳ ಜೊತೆ ಒಂದಿಷ್ಟು ಕಂದಾಚಾರಗಳು ಹುಟ್ಟಿಕೊಂಡವು. ಈ ಕೆಲವು ಆಚರಣೆಗಳು ಕೆಲವು ಸಮುದಾಯಗಳಿಗೆ ಸಾಮಾಜಿಕವಾಗಿ ತುಳಿತಕ್ಕೊಳಗಾಗುವಂತೆ ಮಾಡಿತು. ಗಿರಿಜನರ ಹಟ್ಟಿಯಲ್ಲಿ ಹುಟ್ಟಿದ ಮಗು ಆ ಪರಿಸರದ ಪ್ರಭಾವದಿಂದ ಹೊರಬಂದು ಇತರರೊಡನೆ ತನ್ನ ಹಕ್ಕುಗಳನ್ನು ಪಡೆಯುವುದು ಅಂದು ಅಷ್ಟು ಸುಲಭವಿರಲಿಲ್ಲ. ಅನಕ್ಷರತೆ , ಕುಡಿತ, ಮೇಲು ಕೀಳು ಎನ್ನೋ ಭಾವನೆ ಇನ್ನಿತರ ಪಿಡುಗುಗಳು ಕೆಲವು ಜಾತಿ ಹಾಗು ಸಮುದಾಯಗಳನ್ನು ಸಾಮಾಜಿಕವಾಗಿ ಶೋಷಣೆಗೆ ದೂಕಿದ್ದಂತೂ ಸತ್ಯ. ಇಂತಹ ವರ್ಗಗಳನ್ನು ಮುಖ್ಯವಾಹಿನಿಗೆ ಕರೆತರುವ ಅಗತ್ಯವಿತ್ತು.

2) ಆರ್ಥಿಕ ಅಸಮಾನತೆ : ಇದು ಸಧ್ಯಕ್ಕೆ ಬಹಳ ದೊಡ್ಡ ಸಮಸ್ಯೆ. ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಬಹಳ ದೊಡ್ಡದಿರುವುದು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸೌಂವಿಧಾನದ ನಿಲುವಿಗೆ ಸವಾಲು ಒಡ್ಡುತ್ತಿದೆ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಗು ಎಲ್ಲ ಸವಲತ್ತುಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪಡೆದು ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಸಮರ್ಥವಾಗಿದ್ದರೆ, ಸಣ್ಣ ಗುಡಿಸಲಿನಲ್ಲಿ ಹುಟ್ಟಿದ ಮಗು ತನ್ನ ಆಹಾರದ ಅಗತ್ಯತೆಯನ್ನು ಪೂರೈಸಿಕೊಂಡು ಸಾಮಾನ್ಯ ಶಿಕ್ಷಣ ಪಡೆಯುವುದು ಸವಾಲೇ ಸರಿ. ಈ ಎರಡು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಬೇಕಾಗಿರುವುದು ಸೌಂವಿಧಾನದ ಉದ್ದೇಶ.

3) ಪ್ರಾದೇಶಿಕ ಅಸಮಾನತೆ: ಬೆಂಗಳೂರಂತ ನಗರದಲ್ಲಿ ಹುಟ್ಟಿದ ಮಗುವಿಗೆ ಸಿಗುವ ಶೈಕ್ಷಣಿಕ ಅವಕಾಶಗಳು ಕುಗ್ರಾಮದಲ್ಲಿ ಹುಟ್ಟಿದ ಮಗುವಿಗೆ ಸಿಗುತ್ತಿದೆಯೇ? ಸಿಗಬೇಕು ಅನ್ನುವುದು ನಮ್ಮ ಸೌಂವಿಧಾನದ ಉದ್ದೇಶ . ದೇಶದ ಯಾವುದೇ ಮೂಲೆಯಲ್ಲಿ ಹುಟ್ಟಿದ ಮಗುವಿಗೆ ವಿಕಸನ ಹೊಂದಲು ಸಮವಾದ ಅವಕಾಶಗಳಿರಬೇಕು. ಈ ಅವಕಾಶ ಕಲ್ಪಿಸಬೇಕಾಗಿರುವುದು ಚುನಾಯಿತ ಸರಕಾರಗಳ ಉದ್ದೇಶವಾಗಿರಬೇಕು.

4) ಹೆಣ್ಣು ಗಂಡು ಅನ್ನೋ ಅಸಮಾನತೆ: ಮೂಲತ ನಮ್ಮದು ಪುರುಷ ಪ್ರಧಾನ ಸಮಾಜ. ಇಂತಹ ಸಮಾಜದಲ್ಲಿ ಮಹಿಳೆಯರಿಗೂ ಸಹ ಪುರುಷರಷ್ಟೇ ಸಮಾನ ಅವಕಾಶ ಕಲ್ಪಿಸಬೇಕಾಗಿರುವುದು ಸೌಂವಿಧಾನದ ಉದ್ದೇಶ. ಬಹಳಷ್ಟು ಸಮುದಾಯಗಳು ಮಹಿಳೆಯರಿಗೆ ತಮ್ಮದೇ ಆದ ಕಟ್ಟು ಪಾಡು ವಿಧಿಸಿದೆ. ಆದರೆ ಸೌಂವಿಧಾನದಲ್ಲಿ ಇಂತಹ ಕಟ್ಟು ಪಾಡುಗಳಿಗೆ ಅವಕಾಶ ಇಲ್ಲ. ಅದು ಪುರುಷನೋ, ಮಹಿಳೆಯೋ ಅಥವಾ ತೃತೀಯ ಲಿಂಗಿಯೋ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಸಿಗಬೇಕು . ಆದರೆ ಸಮಾಜದಲ್ಲಿ ಬೇರೂರಿದ್ದ ಹಲವು ಅಂಧ ಅನುಕರಣೆಗಳು ಮಹಿಳೆಯರಿಗೆ ಹಾಗು ತೃತೀಯ ಲಿಂಗಿಗಳಿಗೆ ಸಿಗಬೇಕಾದ ಅವಕಾಶ ಕಲ್ಪಿಸಲು ಅಸಮರ್ಥವಾಗಿದೆ.

reservation6A.jpg

5) V.V.I.P. ಅಸಮಾನತೆ: ಇದು ಸಧ್ಯಕ್ಕೆ ಉದಯಿಸಿರುವ ಹೊಸ ಅಸಮಾನತೆ. ಇದು ಹೀರೋಗಳಿಗೆ ಸಂಬಂದಿಸಿದ್ದು. ಹೀರೋಗಳು ಅಂದರೆ ಸಿನೆಮಾ ಹೀರೊಗಳಲ್ಲ. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರದ್ದು . ಉದಾಹರಣೆಗೆ ರಾಜಕೀಯ , ಧಾರ್ಮಿಕ , ಸಿನೆಮಾ , ಕ್ರೀಡೆ ಅಥವಾ ಯಾವುದೇ ವಿಭಾಗದಲ್ಲಿ ಹೆಸರು ಮಾಡಿದವರು. ಈ ಹೀರೋಗಳಿಗೆ ಕಾನೂನಿಂದ ವಿನಾಯತಿ ಇದೆಯೇ ಎನ್ನೋ ಪ್ರಶ್ನೆ ಹೊಸದಾಗಿ ಉದ್ಭವವಾಗಿದೆ. ಕಾರಣ ಸಾಮಾನ್ಯ ನಾಗರಿಕ ಮಾಡಿರುವ ತಪ್ಪುಗಳಿಗೆ ಆಗುವ ಶಿಕ್ಷೆ ಹಾಗು ಅದನ್ನು ತನಿಖೆ ಮಾಡಲು ತೆಗೆದುಕೊಳ್ಳುವ ಕ್ರಮಗಳು. ಇಂತಹ V.V.I.P ಗಳ ವಿಷಯದಲ್ಲಿ ಆಗುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ. ಸರ್ವರೂ ಸಮಾನರು ಅನ್ನೋ ಸೌವಿಧಾನದ ಆಶಯಕ್ಕೆ ಈ ಆರೋಪ ಸವಾಲು ಎಸೆದಿರುವುದು ಅಂತು ಸುಳ್ಳಲ್ಲ. ಉದಾಹರಣೆಗೆ ನಮ್ಮ ದಕ್ಷಿಣ ಕನ್ನಡದಲ್ಲಿ ನಡೆದಿರುವ ಕೆಲವು ಅಸಹಜ ಸಾವುಗಳು ಸರಿಯಾದ ತನಿಖೆ ಇಲ್ಲದೆ ಹಳ್ಳ ಹಿಡಿದಿರುವುದು. ಅದಕ್ಕೆ ಕಾರಣ ಆರೋಪ ಹೊತ್ತವರು ಈ V.V.I.P ಪಟ್ಟಿಯಲ್ಲಿ ಬರುವುದು ಅನ್ನುವುದು ಜನ ಸಾಮಾನ್ಯರ ಅಭಿಪ್ರಾಯ. ಕಳೆದ ವರ್ಷ ಪ್ರಸಿದ್ಧ ಸಮುದಾಯಕ್ಕೆ ಸಂಬಂದಿಸಿದ ಸ್ವಾಮೀ ಒಬ್ಬರ ಮೇಲೆ ಆರೋಪ ಬಂದಾಗ ತೀರ್ಪು ನೀಡಬೇಕಾದವರೇ ತಮ್ಮ ಬದಲಾವಣೆಯನ್ನು ಕೇಳಿ ಕರ್ತವ್ಯ ವಿಮುಖರಾಗಿದ್ದನ್ನು ನೋಡಿದ್ದೇವೆ. ಪ್ರಸಿದ್ಧ ರಾಜಕಾರಣಿ ಒಬ್ಬಳು ಸತ್ತ ಮೇಲೆ, ಅವಳ ಮೇಲಿನ ಪ್ರಖರಣಗಳು ಸಾಭೀತಾಗಿದ್ದು ನೋಡಿದ್ದೇವೆ. ಇಂತಹ ಪಟ್ಟಿ ಬೆಳೆಯುತ್ತ ಹೋಗುತ್ತದೆ. ದೇಶದ ಯಾವುದೋ ಕುಗ್ರಾಮದಲ್ಲಿ ಹುಟ್ಟಿದ ಒಬ್ಬ ಅನಕ್ಷರಸ್ಥನಿಗೆ ಸಿಗುವ ಕಾನೂನು ಸಹಾಯಗಳು ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರಿಗೆ ಸಿಗುವ ಕಾನೂನು ಸಹಾಯಗಳಿಗಿಂತ ಭಿನ್ನವಾಗಿರಬಾರದು. ಸಧ್ಯಕ್ಕೆ ಇದು ಮೀಸಲಾತಿ ವಿಷಯದಲ್ಲಿ ಯಾವುದೇ ಪಾತ್ರ ವಹಿಸದಿದ್ದರು, ಚುನಾಯಿತ ಸರಕಾರಗಳು ವ್ಯವಸ್ಥೆಯಲ್ಲಿ ಯಾವುದೇ ತಾರತಮ್ಯ ಇಲ್ಲದಂತೆ ಮಾಡುವುದು ಅಗತ್ಯವಾಗಿದೆ. ಯಾಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆ ಸಮಾನರು ಎನ್ನುವುದು ಸೌಂವಿಧಾನದ ಅಭಿಪ್ರಾಯ.

reservation7.jpg

ಹಾಗಾದರೆ ಮೀಸಲಾತಿ ಅನಿವಾರ್ಯವೇ? ಹೌದು ಎಲ್ಲಿವರೆಗೆ ಅಂದರೆ ನಮ್ಮ ಚುನಾಯತ ಸರಕಾರಗಳು ಸರ್ವರಿಗೂ ಸಮಾನ ಅವಕಾಶ ಕಲ್ಪಿಸಲು ಅಸಮರ್ಥವಾಗುತ್ತವೋ ಅಲ್ಲಿವರೆಗೆ. ಯಾವ ಸರಕಾರ ಮೀಸಲಾತಿಯನ್ನು ಹೆಚ್ಚು ಮಾಡುತ್ತಾ ಹೋಗುತ್ತದೋ, ಇನ್ನಷ್ಟು ಸಮುದಾಯಗಳನ್ನು ಮೀಸಲಾತಿಯ ಪಟ್ಟಿಯೊಳಗೆ ಸೇರಿಸುತ್ತ ಹೋಗುತ್ತದೋ, ಆ ಸರಕಾರ ಅಸಮಾನತೆಯನ್ನು ಹೋಗಲಾಡಿಸಲು ಅಸಮರ್ಥವಾಗಿದೆ ಎಂದೇ ಅರ್ಥ ಒಂದು ದೇಶ ಮುಂದುವರೆಯಬೇಕಿದ್ದರೆ ಅಲ್ಲಿಯ ಜನ ಪ್ರಗತಿ ಹೊಂದಬೇಕು. ಸರ್ವರಿಗೂ ಸಮಪಾಲು , ಸಮಬಾಳು ಎನ್ನೋ ಸೌಂವಿಧಾನದ ಆಶಯಗಳು ಈಡೇರಬೇಕು. ದೇಶದ ಯಾವುದೋ ಕುಗ್ರಾಮದ ಬಡವರ ಗುಡಿಸಲಲ್ಲಿ ಹುಟ್ಟಿದ ಮಗುವಿಗೆ ಪ್ರಸಿದ್ಧ ನಗರದ ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಗುವಿಗೆ ಸಿಗುವ ಶಿಕ್ಷಣ ಸಿಕ್ಕುವ ವ್ಯವಸ್ಥೆ ನಿರ್ಮಾಣ ಆದರೆ ಯಾವ ಮೀಸಲಾತಿಯ ಅಗತ್ಯವೂ ಇಲ್ಲ .ಪ್ರತಿ ಚುನಾಯತ ಸರಕಾರದ ಆಶಯಗಳು ಈ ಮೀಸಲಾತಿಯನ್ನು ಕಡಿಮೆ ಮಾಡಿ ಕೊನೆಗೊಂದು ದಿನ ಮೀಸಲಾತಿಯನ್ನು ತೆಗೆಯುವುದು ಆಗಿರಬೇಕು. ಅಂದರೆ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದು. ಆದರೆ 70 ವರ್ಷಗಳಲ್ಲಿ ಇದು ಆಗಿಲ್ಲ ಅನ್ನೋದೇ ಸೋಜಿಗ?

ಹಾಗಾದರೆ ಸಧ್ಯಕ್ಕೆ ಅಸಮಾನತೆ ತೊಲಗಿಸಲು ಸರಕಾರ ಕೈಗೊಂಡಿರುವ ಕ್ರಮಗಳು ಕೆಲಸ ಮಾಡುತ್ತಿಲ್ಲವೇ? ಇದಕ್ಕೆ ಉತ್ತರ ಇಲ್ಲ. ಕಾರಣ ಇಂತಹ ಯೋಜನೆಗಳ ಅನುಕೂಲ ಸಿಗಬೇಕಾದವರಿಗೆ ಸಿಗುತ್ತಿಲ್ಲ. ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳು ಕೋಟಿ ಕೋಟಿ ಸರಕಾರದ ಅನುದಾನ ಸಿಕ್ಕಿದ ಮೇಲು ಮನುಷ್ಯರು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿ ಇದೆ. ಹಿಂದುಳಿದ ವರ್ಗದವರಿಗೆ ಸಿಗಬೇಕಾದ ಸವಲತ್ತುಗಳು ಲಂಚ ಕೊಡದೆ ಸಿಗುವುದಿಲ್ಲ ಅನ್ನೋದು ಕಠೋರಾ ಸತ್ಯ. ಇದಕ್ಕೆ ಮೇಲ್ವರ್ಗದವರು ಕಾರಣರಲ್ಲ. ಹಿಂದುಳಿದ ವರ್ಗಗಳ ನಾಯಕರು ಹಾಗು ಹಿಂದುಳಿದ ಸಮುದಾಯದಿಂದ ಬಂದ ಅಧಿಕಾರಿಗಳು ಕಾರಣ. ಇದು ಕೇವಲ ಹಿಂದುಳಿದ ವರ್ಗಗಳ ಸವಲತ್ತಿಗೆ ಸೀಮಿತವಾಗಿಲ್ಲ. ಸರಕಾರದ ಎಲ್ಲ ಸವಲತ್ತುಗಳು ಕಟ್ಟ ಕಡೆಯ ಪ್ರಜೆಗೆ ಸಿಗುತ್ತಿಲ್ಲ. ಸರಕಾರಗಳು ಕೇವಲ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚು ಮಾಡಲಷ್ಟೇ ಯೋಚನೆ ಮಾಡದೆ ತೆರಿಗೆಯ ಸರಿಯಾದ ಉಪಯೋಗ ಆಗುತ್ತಿದೆಯಾ ಎಂದು ಯೋಚಿಸಬೇಕಾಗಿದೆ. ತೂತು ಬಿದ್ದಿರುವ ಮಡಕೆಗೆ ಎಷ್ಟು ನೀರು ತುಂಬಿದ್ರು ಅದು ವ್ಯರ್ಥವೇ. ಹಾಗಾದರೆ ಸರಕಾರದ ಯೋಜನೆಗಳು ಜನರಿಗೆ ಯಾಕೆ ತಲುಪುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಅದು ನಮ್ಮ ಸದ್ಯದ ವ್ಯವಸ್ಥೆ. ಯಾರು ಎಷ್ಟು ದುಡ್ಡು ಹೊಡೆದ್ರು, ಏನು ಮಾಡಿದ್ರು ಏನು ಆಗೋಲ್ಲ ಅನ್ನೋ ಹುಂಬತನ. ಅದು ನಿಜವೂ ಕೂಡ.

ಮನುಷ್ಯ ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತಾನೆ. ಆಮೇಲೆ ನಾವು ಅವನಿಗೆ ಜಾತಿ, ಧರ್ಮದ ಚೌಕಟ್ಟು ಹಾಕಿ ಅವನ ಪ್ರಪಂಚವನ್ನು ಸಣ್ಣದು ಮಾಡುತ್ತಾ ಹೋಗುತ್ತೇವೆ. ಹುಟ್ಟುವಾಗ ಯಾರು ಯಾವ ಜಾತಿಯಲ್ಲಿ ಹುಟ್ಟಬೇಕು, ಯಾವ ಲಿಂಗದಲ್ಲಿ ಹುಟ್ಟಬೇಕು, ಯಾವ ಊರಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗಾಗಿ ಇವೆಲ್ಲವನ್ನೂ ಮೀರಿದ ವ್ಯವಸ್ಥೆಯನ್ನು ನಿರ್ಮಿಸುವುದು ಸೌಂವಿಧಾನದ ಉದ್ದೇಶ.

reservation3.jpg

ಹಾಗಾದರೆ ಮೀಸಲಾತಿಯನ್ನು ತೆಗೆಯುವುದು ಹೇಗೆ ? ಈ ಎಲ್ಲ ಸಾಮಾಜಿಕ ಅಸಮಾನತೆಯನ್ನು ಅಳತೆ ಮಾಡುವ ಸಾಧನದ ಅಗತ್ಯವಿದೆ. ಒಮ್ಮೆ ಈ ಮಾಪನ ಸಿದ್ಧವಾದ ಮೇಲೆ ಈ ಮಾಪನಕ್ಕೆ ಅನುಗುಣವಾಗಿ ಮೀಸಲಾತಿ ತಯಾರಾಗಬೇಕು. ಈ ಮಾಪನದಲ್ಲಿ ಅಳತೆ ಮಾಡಿದ ಅಸಮಾನತೆಯನ್ನು ಹೋಗಲಾಡಿಸಲು ಯೋಜನೆಗಳು ತಯಾರಾಗಬೇಕು. ಹಾಗು ಈ ಅಳತೆ ಕಾಲ ಕಲಾಕ್ಕೆ ನಡೆದು ಅದರ ಆಧಾರದ ಮೇಲೆ ಮೀಸಲಾತಿಯಲ್ಲಿ ಬದಲಾವಣೆ ಆಗಬೇಕು. ಪ್ರತಿ ಚುನಾಯತ ಸರಕಾರದ ಉದ್ದೇಶ ಮೀಸಲಾತಿಯನ್ನು ಕಡಿಮೆ ಮಾಡುವುದೇ ಆಗಿರಬೇಕು. ಇದೆಲ್ಲಕ್ಕೆ ಬೆನ್ನೆಲುಬಾಗಿ ಕಾನೂನಿನ ಬಲ ಸಿಕ್ಕಬೇಕು. ಸುಳ್ಳು ದಾಖಾಲಾತಿ, ಉದ್ದೇಶಿತ ಹಣದ ದುರುಪಯೋಗ ಇಂತವುಗಳ ಬಗ್ಗೆ ಶೀಘ್ರ ತನಿಖೆ ನಡೆದು ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷೆ ಆಗುವ ವ್ಯವಸ್ಥೆಯ ನಿರ್ಮಾಣವು ಜೊತೆಯಲ್ಲಿಯೇ ನಡೆಯಬೇಕು.

ಉಪಸಂಹಾರ: ಸದ್ಯಕ್ಕಿರುವ ರಾಜಕೀಯ ಪಕ್ಷಗಳ ಸ್ವಾರ್ಥಭರಿತ ರಾಜಕೀಯದಲ್ಲಿ ಇದು ಸಾಧ್ಯವೇ? ಅತಿ ಜನಸಂಖ್ಯೆ ಇರುವ ಜಾತಿ ಧರ್ಮಗಳು ಸಣ್ಣ ಸಮುದಾಯಗಳ ಮೇಲೆ ಆಡಳಿತಾತ್ಮಕವಾಗಿ ಮೇಲುಗೈ ಸಾಧಿಸಬಾರದು ಎನ್ನುವುದು ಸೌಂವಿಧಾನದ ಆಶಯ. ಆದರೆ ಆಗುತ್ತಿರುವುದಾದರೂ ಏನು? ಎಲ್ಲ ಪಕ್ಷಗಳು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಯಾವುದೇ ಅಂಜಿಕೆಯಿಲ್ಲದೆ ಬಹಳ ಜನಸಂಖ್ಯೆ ಇರುವ ಆಧಾರದ ಮೇಲೆ ಆರಿಸುತಿದ್ದಾರೆ. ಹಾಗು ಅದೇ ತಮ್ಮ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತಿದ್ದಾರೆ. ಜನಸಂಖ್ಯೆ ಆದಾರದ ಮೇಲೆ ಆಯಾಯ ಸಮುದಾಯದ ವ್ಯಕ್ತಿಗಳನ್ನು ಸಂಸತ್ತಿಗೆ ಅಥವಾ ವಿಧಾನ ಸಭೆಗೆ ಆರಿಸುವ ವ್ಯವಸ್ಥೆನೆ ಸರಿಯಿಲ್ಲ. ಎಲ್ಲ ವರ್ಗದ ಸಮುದಾಯದ ವ್ಯಕ್ತಿಗಳಿಗೂ ತಮ್ಮ ಸಮುದಾಯವನ್ನು ರಾಜಕೀಯವಾಗಿ ಪ್ರತಿನಿಧಿಸುವ ವ್ಯವಸ್ಥೆ ಇರಬೇಕು. ಆದರೆ ಅದು ಆಯಾಯ ಸಮುದಾಯದ ಜನಸಂಖ್ಯೆಗೆ ಆಧಾರಿತವಾಗಿ ಆಗಿರಬಾರದು.

ಇಂತಿ ನಿಮ್ಮವ;

chandra-maravanthe1.jpg

ಚಂದ್ರ ಮರವಂತೆ

VADABHA.BLOGSPOT.COM

X

Right Click

No right click