ಬ್ರಹ್ಮಾವರ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀಯುತ ಶಂಭು ಸೇರಿಗಾರ್ ನಿಧನ

ಬ್ರಹ್ಮಾವರ :  ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀಯುತ ಶಂಭು ಸೇರಿಗಾರ್ ಅವರು ಹೃದಯಾತದಿಂದ ಇಂದು ನಿಧನರಾಗಿದ್ದಾರೆ.

ಸುರಾಲ್ ನವರಾದ ಅವರು ಶಂಭು ಮಾಸ್ಟರ್ ಎಂದು ಎಲ್ಲರಿಗೂ ಪರಿಚಯ. ಅವರ ಅಗಲಿಕೆ ಅವರ ವಿದ್ಯಾರ್ಥಿ ವೃಂದ ಹಾಗೂ ಸ್ನೇಹಿತರಿಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಆವರೆಷ್ಟೋ  ಕನಸನ್ನು ಕಂಡವರು ಹಾಗೇನೇ ಕನಸಗಳನ್ನು ನನಸಾಗಲು ಶ್ರಮಿಸಿದ ಧೀಮಂತ ವ್ಯಕ್ತಿ. ಅವರ ಜೀವನ ನಮ್ಮೆಲ್ಲರಿಗೂ ಆದರ್ಶಪ್ರಾಯ. ಶ್ರೀ ಏಕನಾಥೇಶ್ವರಿ ದೇವಸ್ಥಾನದ ಸಲಹಾ ಸಮಿತಿ ಸದಸ್ಯರಾಗಿ,ಸಲ್ಲಿಸಿದ ಸೇವೆ  ಅವಿಸ್ಮರಣೀಯ.

ತಾಯಿ ಏಕನಾಥೇಶ್ವರಿ  ಅವರ ದಿವ್ಯಾತ್ಮಕ್ಕೆ ಚಿರಶಾಂತಿಯೊಂದಿಗೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿತ್ತೇವೆ.

 ಅವರ ಕುಟುಂಬದವರೊಂದಿಗೆ ನಾವೆಲ್ಲರೂ  ದುಃಖತಪ್ತರು.   

 


Share