ಸುರೇಖಾ ಎಚ್. ದೇವಾಡಿಗ ಅವರ ’ದೇವಾಡಿಗ ಜನಾಂಗ ಒಂದು ಸಾಂಸ್ಕತಿಕ ಅಧ್ಯಯನ’ ಕೃತಿ ಬಿಡುಗಡೆ

ಉಡುಪಿ : ಸುರೇಖಾ ಹೇಮನಾಥ ದೇವಾಡಿಗ ಅವರ ’ದೇವಾಡಿಗ  ಜನಾಂಗದ ಒಂದು ಸಾಂಸ್ಕತಿಕ ಅಧ್ಯಯನ’ ಎಂಬ ಕೃತಿಯ ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದ ಅಜ್ಜಿಮನೆ ಶ್ರೀಮತಿ ಬುಡ್ಡು ರಾಮ ಶೇರುಗಾರ ಸಭಾಂಗಣದಲ್ಲಿ ಅಕ್ಟೋಬರ್ 6 ರಂದು ಬಿಡುಗಡೆಯಾಯಿತು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ದೇವಾಡಿಗ ಜನಾಂಗ ಒಂದು  ಸಾಂಸ್ಕತಿಕ ಅಧ್ಯಯನ ಎಂಬ ಎಂ ಫಿಲ್ ಸಂಪ್ರಬಂಧವನ್ನು ಸುರೇಖಾ ಹೇಮನಾಥ ದೇವಾಡಿಗ ಅವರು ಸಿದ್ಧಪಡಿಸಿದ್ದರು.
ಈ ಕೃತಿಯನ್ನು ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯಿಲಿಯವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಖಿಲ ಬಾರತದ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಸಂಘ ಮುಂಬಯಿ ಇದರ ಅಧ್ಯಕ್ಷ ರವಿ ಎಸ್. ದೇವಾಡಿಗ, ವಾಮನ್ ಮರೋಳಿ, ಆಲೂರು ರಘುರಾಮ ದೇವಾಡಿಗ, ಬಾರ್ಕೂರು ಜನಾರ್ದನ ದೇವಾಡಿಗ, ಸುರೇಶ್ ದೇವಾಡಿಗ ಪಡುಕೋಣೆ, ಅಣ್ಯಯ್ಯ ಶೇರಿಗಾರ್, ಎಂ ದಯಾನಂದ ದೇವಾಡಿಗ, ಡಾ. ಕೆ. ದೇವರಾಜ್, ಕೆ. ಚಂದ್ರಶೇಖರ್, ಜರ್ನಾದನ ದೇವಾಡಿಗ ಉಪ್ಪುಂದ, ಬಿ. ನರಸಿಂಹ ದೇವಾಡಿಗ, ಶಾರದ ದೇವಾಡಿಗ ಹಾಗೂ ಹೇಮನಾಥ ದೇವಾಡಿಗ ಮತ್ತಿತರು ಉಪಸ್ಥಿತರಿದ್ದರು.

ಯಾದವ ದೇವಾಡಿಗ ಸ್ವಾಗತಿಸಿದರು, ಸುರೇಖಾ ಎಚ್. ದೇವಾಡಿಗರು ಕೃತಿಗೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಎಚ್ ಮೋಹನ್ ದಾಸ್ ಕೃತಿ ಪರಿಚಯ ಮಾಡಿದರು. ಜನಾರ್ದನ ಪಡು ಪಣಂಬೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


Share