ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಶ್ರೀ ಸಾಧು ಸೇರಿಗಾರ ಬೆನಗಲ್ ರಿಗೆ ಕರ್ನಾಟಕ ರಾಜ್ಯ ದೇವಾಡಿಗ ಸಂಘ ದಿಂದ ಸನ್ಮಾನ

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ‌ ಸಂಘ ಮಂಗಳೂರು ಮತ್ತು ಮಹಿಳಾ ಹಾಗೂ ಯುವ ಸಂಘಟನೆ ಗಾಂಧಿನಗರ ಮಣ್ಣಗುಡ್ಡ ಮಂಗಳೂರು ಆಯೋಜಿಸಿದ ದೀಪಾವಳಿ ಸಂಭ್ರಮದಲ್ಲಿ 201920ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಶ್ರೀ ಸಾಧು ಸೇರಿಗಾರ ಬೆನಗಲ್ (ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಿಯಾರ) ಅವರನ್ನು ಸನ್ಮಾಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ರಾ. ದೇ. ಸಂಘ ಮಣ್ಣಗುಡ್ಡ, ಮಂಗಳೂರು  ಅಧ್ಯಕ್ಷರಾದ ಶ್ರೀ ದೇವರಾಜ್. ಕೆ. ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮೊಯ್ಲಿ,  ಪ್ರಧಾನ ಕಾರ್ಯದರ್ಶಿ ಶ್ರೀ  ಶಿವಾನಂದ ಮೊಯ್ಲಿ, ಖಜಾಂಚಿ ಶ್ರೀಮತಿ ಗೀತಾ ಕಲ್ಯಾಣ್ ಪುರ ಉಪಸ್ಥಿತರಿದ್ದರು. 

ಶ್ರೀ ಸಾಧು ಸೇರಿಗಾರ ಬೆನಗಲ್:

ಶ್ರೀಯುತ ನಾಗ ಸೇರಿಗಾರ ಮತ್ತು ಶ್ರೀಮತಿ ಗುಲಾಬಿ ಯವರ ಸುಪುತ್ರನಾಗಿ 1969  ಜನಿಸಿದ ತಾವು ವಿಧ್ಯಾಭ್ಯಾಸದಲ್ಲಿ ಪ್ರಾವಿಣ್ಯತೆ ಸಂಪಾದಿಸಿ ಶಿಕ್ಷಕನಾಗ ಬೇಕೆಂಬ ಹಂಬಲದಿಂದ 1990ರಲ್ಲಿ ಸಹ ಶಿಕ್ಷಕನಾಗಿ ವ್ರತ್ತಿ ಜೀವನ ಆರಂಭಿಸಿ ಬ್ರಹ್ಮಾವರ ವಲಯದ ಅಮುಂಜೆ, ಚೇರ್ಕಾಡಿ, ಸಂತೆಕಟ್ಟೆಯಲ್ಲಿ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿ ಇದೀಗ 5 ವರ್ಷಗಳಿಂದ ಶಿರಿಯಾರ ಶಾಲೆಯಲ್ಲಿ  ಅಮುಲ್ಯಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಗಳಿಸಿರುತ್ತೀರಿ . ಆದರ್ಶ ಶಿಕ್ಷಕರಾಗಿರವುದಲ್ಲದೆ ಉತ್ತಮ ಸಂಘಟನಾ ಚತುರರಾಗಿ ಹಲವಾರು ಸಂಘ ಸಂಸ್ಥಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ್ದೀರಿ.

ಬ್ರಹ್ಮಾವರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಬಾರ್ಕೂರು ಎಕನಾಥೇಶ್ವರಿ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಬೆನಗಲ್ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಯಾವುದೇ ಫಲಾಫೇಕ್ಷೆ ಬಯಸದೇ ತಮ್ಮ ಕ್ರಿಯಾಶೀಲ ಮತ್ತು ಸಂಘಟನಾ ಚಾತುರ್ಯ ತೋರಿಸಿದ್ದೀರಿ .

ಅಧ್ಯಾಪಕ ವ್ರತ್ತಿ ಯಲ್ಲಿ ತೋರಿದ ದಕ್ಷತೆ, ಪ್ರಾಮಾಣಿಕತೆ ಹಾಗೂ ಕರ್ತವ್ಯ ಶೀಲತೆಯನ್ನು ಗುರುತಿಸಿ 2018-19ರಲ್ಲಿ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದು ಹಲವಾರು ಸಂಘ ಸಂಸ್ಥಗಳಲ್ಲಿ ಸನ್ಮಾನ ಪಡೆದಿದ್ದೀರಿ. ಇದಕ್ಕೆ ಪ್ರತಿ ಸಾಕ್ಷಿ ಎಂಬಂತೆ 2019-20ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾಗಿರುವುದು ನಮ್ಮ ಸಮಸ್ತ ದೇವಾಡಿಗ ಸಮಾಜಕ್ಕೆ ಹೆಮ್ಮೆಯ ವಿಚಾರ.

ತಮ್ಮಿಂದ  ವಿಧ್ಯಾರ್ಥಿಗಳಿಗೆ,  ಸಮಾಜಕ್ಕೆ ಇನ್ನಷ್ಟು ಕೊಡುಗೆಗಳು ಸಿಗುವಂತಾಗಲಿ. ನಿಮ್ಮ ವೈಯಕ್ತಿಕ ಹಾಗೂ ವ್ರತ್ತಿ ಜೀವನದ ಬದುಕು ಹಸನಾಗಲಿ. ತಾಯಿ ಏಕನಾಥೇಶ್ವರಿ ಯಶಸ್ಸನ್ನು ಕರುಣಿಸಲಿ. 

~ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ದೇವಾಡಿಗ ಸಂಘ ಮಂಗಳೂರು,ಮಹಿಳೆ ಮತ್ತು ಯುವ ಸಂಘಟನೆ ಮಂಗಳೂರು.

ಇತರ ಸನ್ಮಾನಗಳು:


 

 

 


Share