ಕಣ್ವತೀರ್ಥ ತಲಪಾಡಿ ದೇವಾಡಿಗ ಸುಧಾರಕ ಸಂಘ ಇದರ ನೂತನ ಸಭಾಭವನದ ಉದ್ಘಾಟನೆ

ಮಂಗಳೂರು: ಕಣ್ವತೀರ್ಥ ತಲಪಾಡಿ ದೇವಾಡಿಗ ಸುಧಾರಕ ಸಂಘ ಇದರ ನೂತನ ಸಭಾಭವನದ ಉದ್ಘಾಟನೆ ಮತ್ತು ಸಭಾಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು.

ಸಭಾಂಗಣದ ಉದ್ಗಾಟನೆಯನ್ನು ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಅಶೋಕ್ ಮೊಯ್ಲಿ ನೆರವೇರಿಸಿದರು,

ನಂತರ ಸಮಾಜದ ಹಿರಿಯರು ಕರ್ನಾಟಕ ರಾಜ್ಯ ದೇವಾಡಿಗ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ವಾಮನ ಮರೋಳಿ ದೀಪವನ್ನು ಬೆಳಗಿಸಿ ಸಭೆಯನ್ನು ಉದ್ಗಾಟಿಸಿ, ಶುಭವನ್ನುಕೋರಿದರು.

ಕದ್ರಿ ಮಂಜುನಾಥ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ದಿನೇಶ್ ದೇವಾಡಿಗ ಕದ್ರಿ, ಮಂಗಳಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕೆ ಜೆ ದೇವಾಡಿಗ, ಸಂಘದ ಅಧ್ಯಕ್ಷರಾದ ಸೋಮಪ್ಪ ದೇವಾಡಿಗ ಕಾಂತೊಚ್ಚಿಲ್, ಶ್ರೀಮತಿ ರಾಮಣಿ ಸೋಮಪ್ಪ ದೇವಾಡಿಗ, ಶ್ರೀ ಕರುಣಾಕರ ಎಂ ಎಚ್, ಶ್ರೀ ಬಾಲಚಂದ್ರ ಕೆ ಸಿ, ಶ್ರೀ ರವೀಂದ್ರನಾಥ ತಲೆಪಯ್ಯತ್ತೋಡು, ಸೃಷ್ಠಿ ರಥ ಸಮರ್ಪಣಾ ಸಮಿತಿಯು ಅಧ್ಯಕ್ಷರಾದ ರಾಮ್ ದಾಸ್ ಬಂಟ್ವಾಳ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಭಾಭವನ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು, ಭೋಜನದ ನಂತರ ಸಮಾಜ ಬಾಂಧವರಿಂದ ಭಜನೆ, ನೃತ್ಯ ಹಾಸ್ಯ ಪ್ರಹಸನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


Share