ಜೀವನದ ಅಂತಿಮ ಯಾತ್ರೆಯಲ್ಲಿ ಸದಾ ಸೇವೆ ಸಲ್ಲಿಸುತ್ತಿದ್ದ ಬ್ರಹ್ಮಾವರದ ಸಿದ್ದಣ್ಣ ದೇವಾಡಿಗರು ಇನ್ನಿಲ್ಲ

ಬ್ರಹ್ಮಾವರ : ಆಸುಪಾಸಿನ ಗ್ರಾಮಗಳಾದ ಚಾಂತಾರು , ಅಗ್ರಹಾರ, ವಾರಂಬಳ್ಳಿ, ಹಂದಾಡಿ ಗ್ರಾಮದಲ್ಲಿ ಜಾತಿ ಭೇದ ವಿಲ್ಲದೇ ಯಾರೇ ಮ್ರತ ಪಟ್ಟರು ಅಲ್ಲಿಗೆ ಧಾವಿಸಿ ಅದರ ವಿಧಿ ವಿಧಾನಗಳನ್ನು ಮನೆಯಿಂದ ಸ್ಮಶಾನ ಭೂಮಿಯಲ್ಲಿನ ಮನೆಯವರಿಂದ ಮಾಡಿಸಿ ಹಿಂತಿರುಗುತ್ತಿದ್ದ ಶ್ರೀ ಸಿದ್ದಣ್ಣ ಬ್ರಹ್ಮಾವರ ಆಸು ಪಾಸಿನ ಜನತೆಗೆ  ಆಪ್ತಭಾಂದವರಾಗಿದ್ದರು.

ಶ್ರೀ ಏಕನಾಥೇಶ್ವರಿ ದೇವಸ್ತಾನದ ಉಳುವ ಬಿತ್ತುವ ಕಾರ್ಯಕ್ರಮದಲ್ಲಿ ಎರಡು ಎತ್ತುಗಳ ಜತೆ ಅವರೇ ಉತ್ತಿದನ್ನು ನಾವು ಸ್ಮರಿಸಬಹುದು. ಅಲ್ಪ ಕಾಲದ ಅಸೌಖ್ಯದಿಂದ ಇಂದು ಅವರು ಸ್ವರ್ಗಸ್ತರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.

ಅವರ ಕುಟುಂಬಕ್ಕೆ ಈ ದುಖಃ ಸಹಿಸುವ ಶಕ್ತಿ ಕೊಡಲಿ ಎಂದು ಭಗವಂತ ನಲ್ಲಿನ ನಮ್ಮ ಪ್ರಾರ್ಥನೆ.

ಸಿದ್ದಣ್ಣ ನಿಮಗಿದೋ ನಮ್ಮ ಆದರದ ಶ್ರಧ್ಧಾOಜಲಿ.

ಸರ್ವ ಸೇವಾದಾರರು

*ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್*


Share