ಉಡುಪಿ: ಜಯ ಶೇರಿಗಾರ್ ಯು. ನಿಧನ

ಉಡುಪಿ: ಸಿಂಡಿಕೇಟ್ ಬ್ಯಾಂಕಿನ ಮಾಜಿ ಉದ್ಯೋಗಿ ಉಡುಪಿಯ ನಿವಾಸಿ ಜಯ ಶೇರಿಗಾರ್ ಯು. ಅವರು ಹೃದಯಾಘಾತದಿಂದ ನಿನ್ನೆ ಎ.23 ರ ಸಂಜೆ 5:15 ಕ್ಕೆ ನಿಧನರಾದರು. ಉಡುಪಿ ಶಾಮಿಲಿ ಬಳಿಯ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ ಅವರು ಆಕಸ್ಮಾತ್ ಅಸ್ವಸ್ಥರಾದ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅವರ ಪತ್ನಿ ಮತ್ತು ಪುತ್ರ ದಾಖಲಿಸಿದರು. ಆದರೆ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದಾರೆಂದು ತಿಳಿಸಲಾಯಿತು.

ಕಳೆದ ಒಂದು ವರ್ಷದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಅವರು ಇತ್ತೀಚಿಗೆ ಮನೆಯಲ್ಲಿಯೇ ಇದ್ದು, ಇತ್ತೀಚಿನ ಸಾಮಾಜಿಕ ಬೆಳವಣಿಗೆಯಿಂದ ಹಿಂದೆ ನಿಗದಿ ಪಡಿಸಿದ ದಿನ ತಪಾಸಣೆಗೆ ಆಸ್ಪತ್ರೆಗೆ ಬರುವುದು ಅಷ್ಟು ಸಮಂಜಸವಲ್ಲ ಎಂಬ ವೈದ್ಯರ ಸಲಹೆ ಮೇರೆಗೆ ಅಲ್ಪ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಮನೆಯಲ್ಲಿಯೇ ಇದ್ದರು.  

ಅವರ ಪತ್ನಿ ಅವರ ಆರೋಗ್ಯದ ಬಗ್ಗೆ ನೋಡಿಕೊಳ್ಳುತ್ತಿದ್ದು ಪುತ್ರ ಮತ್ತು ಪುತ್ರಿಯೂ ಕೂಡ ಸಹಕರಿಸುತ್ತಿದ್ದರು. ಇಂಜಿನಿಯರ್ ಪುತ್ರಿ ಇತ್ತೀಗಷ್ಟೆ ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದು ಊರಿಗೆ ಬರಲಾಗದ ಪರಿಸ್ಥಿತಿಯಲ್ಲಿದ್ದಾರೆ.

ಜಯ ಶೇರಿಗಾರ್ ರವರು Mcom. LLB, CAIIB ಪದವೀಧರಾಗಿದ್ದು, ರೋಟರ್ರ್ಯಾಕ್ಟ್ ಸಂಸ್ಥೆಯ ಡಿ.ಆರ್.ಆರ್ ಆಗಿ , ಉಡುಪಿ ಟೆಂಪಲ್ ಸಿಟಿ ಜೇಸಿಯ ಅಧ್ಯಕ್ಷ ರಾಗಿ , ಉಡುಪಿಯ ಯುವ ದೇವಾಡಿಗ ಸಂಘದ ಅಧ್ಯಕ್ಷ ರಾಗಿ ಮತ್ತಿತರ ಹಲವಾರು ಸೇವಾ ಸಂಸ್ಥೆಗಳಲ್ಲಿ ಸಕ್ರೀಯ ಸೇವೆ ಸಲ್ಲಿಸಿದ್ದರು.

ಇವರು ದಿ.ಎಂ.ಶೇಷ ಶೇರಿಗಾರ್ ಪುತ್ರ ಹಾಗು ದಿ. ಬಿಜೂರು ಗೋವಿಂದಪ್ಪ ಬೆಸ್ಕೂರ್ ರವರ ಅಳಿಯ.

ಅಂತ್ಯಕ್ರಿಯೆ ಇಂದು ಎ. 24 ಬೆಳಿಗ್ಗೆ 10:30 ಕ್ಕೆ ಉಡುಪಿ ಬೀಡಿನಗುಡ್ಡೆ ರುದ್ರ ಭೂಮಿ ಯಲ್ಲಿ ನಡೆಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.

My heartfelt condolences go out to you and your family. I will surely miss the presence of a truly lovable and kind person. At this difficult time in your life,; let God Almighty bestow strenth & health to the bereaved family Mrs.B.G.Jayanthi, Dheeraj & Disha to sustain this untimely loss. 

ಶ್ರಿಯುತರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.


Share