ಲಾಕ್‌ಡೌನ್‌ ಹಿನ್ನೆಲೆ: ಇನ್ಯಾರಿಗೂ ಪ್ಯಾಕೇಜ್‌ ಇಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇತರ ಯಾವುದೇ ಸಮುದಾಯಕ್ಕೆ ಸದ್ಯಕ್ಕೆ ಪ್ಯಾಕೇಜ್‌ ಘೋಷಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಸರಕಾರವು ಈಗಾಗಲೇ ಶಕ್ತಿ ಮೀರಿ ಏನೆಲ್ಲ ಸಾಧ್ಯವೋ ಅಷ್ಟು ಪರಿಹಾರ ಘೋಷಿಸಿದೆ. ಹೀಗಾಗಿ ಮತ್ತೆ ಪ್ಯಾಕೇಜ್‌ ಘೋಷಿಸುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ 56ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಆವರಣದ ನೆಹರೂ ಪ್ರತಿಮೆಗೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದ ಅನಂತರ ಮಾತನಾಡಿದ ಅವರು, ಈಗ ಘೋಷಿಸಿರುವ ಪ್ಯಾಕೇಜ್‌ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ದೇವಸ್ಥಾನದಲ್ಲಿ ವಾದ್ಯ , ಸುಚಿತ್ವ ಹಾಗೂ ಬಾಣಸಿಗ ದುಡಿಮೆಯ ದೇವಾಡಿಗರಿಗೆ ಆಪತ್ಕಾಲಕ ಸಹಾಯದ ಬಗ್ಗೆ CM ಗೆ ಮನವಿ. (Click)

ವಾದ್ಯಕಲಾವಿದರು ಹಾಗೂ ಪರಿಚಾರಿಕರಿಗೆ ಪರಿಹಾರ: ದೇವಾಡಿಗ ಸಂಘಗಳಿಂದ ಸುಕುಮಾರ ಶೆಟ್ಟಿಯವರಿಗೆ ಮನವಿ (CLICK)

 

 


 


Share