ಕರ್ನಾಟಕ ರಾಜ್ಯ ರಾಜ್ಯೋತ್ಸವ ವಿಜೇತ ವಿದ್ವಾನ್ ಶ್ರೀ ನಾಗೇಶದ ಎ. ಬಪ್ಪನಾಡು

 

ವಿದ್ವಾನ್ ಶ್ರೀ ನಾಗೇಶದ ಎ. ಬಪ್ಪನಾಡು ಇವರದ್ದು ಸ೦ಸ್ಕ್ರುತ ಸಂಗೀತದ ಮನೆತನ. ನಾಗಸ್ವರ  ವಾದದಲ್ಲಿ ಪಂಡಿತರಾಗಿದ್ದ ಹಾಗೂ ಸುಮಾರು 6 ದಶಕಗಳ ಕಾಲ ನಾಗಸ್ವರ ವಾದಕರಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ ಶ್ರೀ ಅಣ್ಣು ಶೇರಿಗಾರ ಹಾಗೂ ಶ್ರೀಮತಿ ಅಪ್ಪಿ ಶೇರಿಗಾರ್ತಿ ಇವರಿಗೆ ಸುಪುತ್ರನಾಗಿ ಜನಿಸಿದರು (28.07.1962). ಇವರು ಬಾಲ್ಯದಿಂದಲೇ ಪರಂಪರಾನುಗತವಾಗಿ ಬಂದ ನಾಗಸ್ವರ ವಾದನದ ಬಗ್ಗೆ ಅಪಾರ ಆಸಕ್ತಿ ಹೊಂದಿದವರಾಗಿದ್ದರು.

ನಾಗಸ್ವರ ವಾದನದ ಪ್ರಾಥಮಿಕ ಶಿಕ್ಷಣವನ್ನು ತನ್ನ ತಂದೆಯವರಿಂದ ಪಡೆದ ಬಳಿಕ ಹೆಸರಾಂತ ವಾದಕರಾದ ಬೆಂಗಳೂರಿನ ವಿದ್ವಾನ್ ಶ್ರೀ ಮುನಿವೆಂಕಟಪ್ಪ ಇವರಿಂದ ಪಡೆದರು. ಸುಮಾರು 15 ವರ್ಷಗಳ ಕಾಲ ಸತತವಾಗಿ ಅತ್ಯಂತ ಹೆಸರಾಂತ ನಾಗಸ್ವರ ವಾದಕರಾದ ತಂಜಾವೂರು ಬಳಿಯ ಕ್ಯೂವುಳೂರಿನ ಕಲೈಮಾಮಣಿ ಶ್ರೀ ಎನ್. ಈ. ಗಣೇಶನ್ ಇವರಲ್ಲಿ ಪಡೆದ ಶಿಕ್ಷಣವು ಶ್ರೀಯುತ ನಾಗೇಶ್ ಎ. ಬಪ್ಪನಾಡು ಇವರನ್ನು ಓರ್ವ ಪ್ರಬುದ್ಧ ಕಲಾವಿದನನ್ನಾಗಿ ರೂಪಿಸಿತು. ಕೃತಿಗಳ ಸಾಹಿತ್ಯದ ಬಗ್ಗೆಯೂ ಜ್ಞಾನಸ್ಥರಾಗಿದ್ದ ಇವರ ಗುರುಗಳು ಶಿಕ್ಷಣ ಕ್ರಮವು ನಾಗೇಶ್ ಎ. ಬಪ್ಪನಾಡು ಇವರ ನಾಗಸ್ವರ ವಾದನದ ಮೇಲೆ ಅಪಾರ ಪ್ರಭಾವವನ್ನುಂಟು ಮಾಡಿದೆ. ಗಾಯಕಿ ಶೈಲಿಯಲ್ಲಿ ನಾಗಸ್ವರ ವಾದನವನ್ನು ಮಾಡುವ ಬೆರಳೆಣಿಕೆಯ ಕಲಾವಿದರಲ್ಲಿ ನಾಗೇಶ್ ಎ. ಬಪ್ಪನಾಡು ಕೂಡಾ ಒಬ್ಬರು ಎಂಬುದು ಗಮನಾರ್ಹ ಅಂಶ

ಆಕಾಶವಾಣಿಯ ಎ ಹೈ ಶ್ರೇಣಿಯ ಕಲಾವಿದರಾಗಿರುವ ಇವರು ದೇಶದ ನೂರಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಸಂಗೀತ ರಸಿಕರ ಪ್ರಶಂಶೆಗೆ ಪಾತ್ರರಾಗಿರುತ್ತಾರೆ. ಆಕಾಶವಾಣಿ ಹಾಗೂ ದೂರದರ್ಶನಗಳಲ್ಲೂ ನಿರಂತರವಾಗಿ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಸಂಗೀತ ವಿಮರ್ಶಕರು ಹಾಗೂ ಪತ್ರಿಕೆಗಳು ಇವರ ಕಾರ್ಯಕ್ರಮಗಳಿಗೆ ಹೀಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪಂತುವರಾಳಿ ರಾಗದ ಶಿವಶಿವ ವಿಠ್ಠಲ ರಾಮಮೂರ್ತಿಯವರ ದ್ವಂದ್ವ ವಾದನ ಮಾದರಿ ಜುಗಲ್ ಬಂದಿಯಂತಿತ್ತು. – ಗಾನಪ್ರಿಯ

ಶಹನ ರಾಗದ ಪ್ರಸ್ತುತಿ ಅತ್ಯಂತ ಮನೋಜ್ಞವಾಗಿತ್ತು. - ಶ್ರೀ ಎ. ಈಶ್ವರಯ್ಯ

ಕಚೇರಿಯ ಅತ್ಯತ್ತಮ ಕಾರ್ಯಕ್ರಮಕ್ಕೆ ಒಂದು ಮಾದರಿಯಾಗಿತ್ತು.ಅಭಿವ್ಯಕ್ತಿ. ಬೆಂಗಳೂರು

ಇವರ ಪ್ರತಿಭೆಗೆ ಸಂದ ಪ್ರಶಸ್ತಿ, ಸನ್ಮಾನ ಹಾಗೂ ಗೌರವಗಳು ನೂರಾರು; ಪ್ರಮುಖವಾದವು ಇಲ್ಲಿವೆ :

• ಕರ್ನಾಟಕ ರಾಜ್ಯ ಪ್ರಶಸ್ತಿ (1994)

 (ಮುಖ್ಯಮಂತ್ರಿ ಮಾನ್ಯ ಶ್ರೀ ಎಂ. ವೀರಪ್ಪ ಮ್ಯೊಲಿಯವರಿಂದ)

• ಕರ್ನಾಟಕದ ರಾಜ್ಯಪಾಲ ಶ್ರೀ ಖುರ್ಷಿದ ಆಲಂ ಖಾನ್‍ರವರಿಂದ ಮಾನ್ಯ ಶ್ರೀ ಎಂ. ವೀರಪ್ಪ ಮ್ಯೊಲಿಯವರ ಸಮ್ಮುಖದಲ್ಲಿ ಸನ್ಮಾನ (09.05.1999)

• ಪೂಜ್ಯ ಡಾ. ಖ. ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನ (1995)

• ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸಾಮೀಜಿ, ಪೇಜಾವರ ಮಠದವರಿಂದ ‘ನಾದಸ್ವರ ವಿಶಾರದ” ಬಿರುದು ಪ್ರದಾನ (10.11.01)

• ರಾಗಧನ (ರಿ.), ಉಡುಪಿ ಇವರಿಂದ ಸನ್ಮಾನ

•ಸಂಗೀತ ಪರಿಷತ್ – ಮಂಗಳೂರು (ರಿ) ಇವರಿಂದ ಸನ್ಮಾನ

• ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸಂಸ್ಥೆಯಿಂದ ಸನ್ಮಾನ

• ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥರಿಂದ ಸನ್ಮಾನ

• ಶಾಸ್ತ್ರೀಯ ಸಂಗೀತ ಸಭಾ (ರಿ), ಕಾರ್ಕಳ ಇವರಿಂದ ಸನ್ಮಾನ

• ಡಾ. ಶಿವರಾಮ ಕಾರಂತರಿಂದ ಸನ್ಮಾನ (1993)

• ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರಿಂದ ಸನ್ಮಾನ

• ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಸಾರ್ವನಿಕ ಸನ್ಮಾನ

• ಸಾರ್ವಜನಿಕರಿಂದ ಮುಲ್ಕಿಯ ದೇವಾಡಿಗ ಸಮಾಜ ಭವನದಲ್ಲಿ ಸನ್ಮಾನ

• ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರಿಂದ ಕೃಷ್ಣಾನುಗೃಹ ಪ್ರಶಸ್ತಿ

• ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಭುದಪ್ರಿಯ ಸ್ವಾಮೀಜಿಯವರಿಂದ ‘ನಾದಕೇಸರಿ’  ಪ್ರಶಸ್ತಿ ಪ್ರದಾನ

• ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಸ್ವಾಮೀಜಿಯವರಿಂದ ಸನ್ಮಾನ

• ಡಾ. ಎಂ ಬಾಲಮುರಲೀಕೃಷ್ಣ ಹಾಗೂ ಗೌರವಾನ್ವಿತ ರಾಜ್ಯಪಾಲ ಟಿ.ಎನ್. ಚತುರ್ವೇದಿಯ ಸವಿತಾ ಸಮಾಜ. ಬೆಂಗಳೂರು ಇವರಿಂದ ‘ಕಲಾಶ್ರೀ’ ಪ್ರಶಸ್ತಿ ಪ್ರದಾನ

• ಮೈಸೂರು ದಸರಾ ಸಂದರ್ಭದಲ್ಲಿ ಸನ್ಮಾನ

• ಮಾನ್ಯ ಗೃಹ ಸಚಿವ ಡಾ.ವಿ.ಎಸ್. ಆರ್ಚಾರ್ಯರಿಂದ ಸನ್ಮಾನ

• ಹೆಸರಾಂತ ಗಾಯಕಿ ಶ್ರೀಮತಿ ಅನುರಾಧ ಪೊದುವಾಲ್ ಇವರಿಂದ ಸನ್ಮಾನ

ಕಳೆದಸುಮಾರು ಎರಡು ದಶಕಗಳಿಂದ ನಾಗೇಶ್ ಎ. ಬಪ್ಪನಾಡು ಇವರು ಶ್ರೀ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 


Share