ಗರ್ಲ್ಸ್ ಚೆಸ್ U19 : ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್‍ ಗೆ ಆಯ್ಕೆಯಾದ ಮಹಿಮಾ. ವಿ. ಸೇರಿಗಾರ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ ಮಹಿಮಾ ವಿ. ಸೇರಿಗಾರ ಅ. 20ರಿಂದ 22ರವರೆಗೆ ಗುಲ್ಬರ್ಗಾದಲ್ಲಿ ನಡೆದ ಅಂಡರ್ 19 ಗಲ್ರ್ಸ್ ಚೆಸ್ ಚಾಂಪಿಯನ್ ಶಿಪ್-2018ರಲ್ಲಿ ಆಡಿದ 7 ಪಂದ್ಯಗಳಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಅ.13ರಿಂದ 16ರ ವರೆಗೆ ತಮಿಳುನಾಡಿನ ವೆಲ್‍ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ಬಾರತ ಮಟ್ಟದ ಅಂತರ ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲೂ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿ 7 ಪಂದ್ಯಗಳಲ್ಲೂ ಗೆಲವು ಸಾಧಿಸಿದ್ದರು.

ಅವರು ನಿಟ್ಟರೂ ವಿನೋದ್ ಸೇರಿಗಾರ್ ಮತ್ತು ಸುಜಾತ ದಂಪತಿ ಪುತ್ರಿ.

ಹಿಂದಿನ ವರದಿಗಳು:

1) MAHIMA SHERIGAR shines again at National Level Chess (Clk)

2) Udupi's Mahima Sherigar bags State level Chess Championship. ( Clk)


Share