ಬ್ರಹ್ಮಾವರ ದೇವಾಡಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಹಂಗಾರಕಟ್ಟೆ ವಲಯದಿಂದ ದೇಣಿಗೆ

(ಮಾಬುಕಳ ಹಂಗಾರಕಟ್ಟೆ ರಾಧಾ ದೇವಾಡಿಗ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮನೆಯವರು ಬ್ರಹ್ಮಾವರ ದೇವಾಡಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ರೂಪಾಯಿ 10,000 ದೇಣಿಗೆಯಾಗಿ ನೀಡಿರುತ್ತಾರೆ.)

ಬ್ರಹ್ಮಾವರ: ದೇವಾಡಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಹಂಗಾರಕಟ್ಟೆ ವಲಯದಿಂದ  ಒಟ್ಟು ರೂಪಾಯಿ 1,53,000/-ದೇಣಿಗೆಯಾಗಿ ನೀಡಿ ಅಭೂತ ಪೂರ್ವ ಸಹಕಾರ ನೀಡಿರುತ್ತಾರೆ.

ಈ ಸಂಧರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದವರು ನಮ್ಮ ಸಂಘದ ಉಪಾಧ್ಯಕ್ಷರೂ ಅಲ್ಲಿಯ ಪ್ರಮುಖರಾದ ಶ್ರೀ ನಾಗರಾಜ ದೇವಾಡಿಗ ಹಂಗಾರಕಟ್ಟೆ, ಹಂಗಾರಕಟ್ಟೆ ಯುವ ಘಟಕದ ಅಧ್ಯಕ್ಷರಾದ ಶ್ರೀ ರಮೇಶ ದೇವಾಡಿಗ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ರಾಘವೇಂದ್ರ ದೇವಾಡಿಗರವರು. ಇವರಿಗೂ,ಹಂಗಾರಕಟ್ಟೆಯ ನಮ್ಮ  ದೇವಾಡಿಗ  ಸಮಾಜದ ಎಲ್ಲಾ ಬಂಧುಗಳಿಗೆ ತಾಯಿ ಏಕನಾಥೇಶ್ವರಿ ಆಯುರಾರೋಗ್ಯ, ಐಶ್ವರ್ಯ, ಸಂಪತ್ತನ್ನು ಸದಾ ಕರುಣಿಸಲಿ ಎಂದು ಹಾರೈಸುತ್ತೇವೆ.
~ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ದೇವಾಡಿಗ ಸಂಘ ಬ್ರಹ್ಮಾವರ.


~ ಹಂಗಾರಕಟ್ಟೆ,ಮಾಬುಕಳ ಸರಸ ದೇವಾಡಿಗ ಸ್ಮರಣಾರ್ಥ ಅವರ ಮನೆಯವರು  10,000 ರೂಪಾಯಿ ಬ್ರಹ್ಮಾವರ ದೇವಾಡಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.


Share