ನಾ ವೈದ್ಯಳಾಗುವೆ! – ಎಸ್ ಎಸ್ ಎಲ್ ಸಿ ಯಲ್ಲಿ 3ನೇ ರ್ಯಾಂಕ್ ಪಡೆದ ವಿದ್ಯಾಶ್ರೀ ದೇವಾಡಿಗ ಬಾರಕೂರು

ಮೂಡುಬಿದಿರೆ: ಹಾಸ್ಟೆಲ್‌ನಲ್ಲಿ ಇದ್ದು ಅಭ್ಯಾಸ ಮಾಡಿ ದ್ದೇನೆ. 625ರ ಗುರಿ ಇತ್ತು. ವೈದ್ಯೆಯಾಗಬೇಕು ಎಂದುಕೊಂಡಿದ್ದೇನೆ- ಇದು ಎಸೆಸೆಲ್ಸಿಯಲ್ಲಿ 623 ಅಂಕ ಗಳಿಸಿರುವ ಆಳ್ವಾಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ವಿದ್ಯಾಶ್ರೀ ಅವರ ಮಾತು.

ಮೂಲತಃ ಬಾರಕೂರಿನವರಾಗಿದ್ದು, ಬೆಂಗಳೂರಿನ ದಾಸರಹಳ್ಳಿಯಲ್ಲಿ ಪ್ರಾವಿಶನ್‌ ಸ್ಟೋರ್‌ ಹೊಂದಿರುವ ಉಮೇಶ್‌ ಮತ್ತು ವಿಜ್ಞಾನ ಶಿಕ್ಷಕಿ ಪುಷ್ಪಾ ದಂಪತಿಯ ಅವರ ಕಿರಿಯ ಪುತ್ರಿ ವಿದ್ಯಾಶ್ರೀ.

ಮಗಳ ಸಾಧನೆ ನೋಡಿ ಸಂತೋಷವಾಗಿದೆ. ಒಳ್ಳೆಯ ವಿದ್ಯಾಸಂಸ್ಥೆಯಲ್ಲಿ ಓದಿದ್ದಾಳೆ. ಮುಂದೆ ವಿಜ್ಞಾನ ವಿಭಾಗಕ್ಕೆ ಸೇರುವ ಉತ್ಸಾಹ ಆಕೆಗೂ ಇದೆ, ನಮಗೂ ಉತ್ಸಾಹವಿದೆ ಎಂದರು ತಾಯಿ ಪುಷ್ಪಾ.

ಎಸ್ ಎಸ್ ಎಲ್ ಸಿ ಯಲ್ಲಿ 625/623 ಅಂಕ ಗಳಿಸಿ 3ನೇ ರ್ಯಾಂಕ್ ಪಡೆದ ವಿದ್ಯಾಶ್ರೀ ದೇವಾಡಿಗ ಬಾರಕೂರು (Click)


Share